AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರದಲ್ಲಿ ಅಪರೂಪದ 'ಆಲಿವ್ ನೀರು ಹಾವು' ಪತ್ತೆ! ಸುರಕ್ಷಿತವಾಗಿ ಕಾಡಿಗೆ ರವಾನೆ

ಕೋಲಾರದಲ್ಲಿ ಅಪರೂಪದ ‘ಆಲಿವ್ ನೀರು ಹಾವು’ ಪತ್ತೆ! ಸುರಕ್ಷಿತವಾಗಿ ಕಾಡಿಗೆ ರವಾನೆ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Oct 02, 2026 | 11:30 AM

Share

ಕೋಲಾರದ ಮಾಸ್ತಿ ಬಡಾವಣೆಯ ಪಶುವೈದ್ಯ ಡಾ. ರಾಹುಲ್ ಅವರ ಮನೆಯಲ್ಲಿ ಅಪರೂಪದ 'ಆಲಿವ್ ನೀರಾವು' (Olive Keelback) ಪತ್ತೆಯಾಗಿದೆ. ವಿಷರಹಿತವಾದ ಈ ಅಪರೂಪದ ಹಾವನ್ನು ಉರಗ ರಕ್ಷಕ ನಾಗರಾಜ್ ಅವರು ಸುರಕ್ಷಿತವಾಗಿ ರಕ್ಷಿಸಿ, ನಂತರ ಅರಣ್ಯ ಪ್ರದೇಶಕ್ಕೆ ತಂದು ಬಿಟ್ಟಿದ್ದಾರೆ. ಉರಗ ರಕ್ಷಕರ ಸಮಯಪ್ರಜ್ಞೆಗೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.

ಕೋಲಾರ, ಅಕ್ಟೋಬರ್ 02: ಕೋಲಾರದ ಮಾಸ್ತಿ ಬಡಾವಣೆಯಲ್ಲಿರುವ ಪಶುವೈದ್ಯ ಡಾ. ರಾಹುಲ್ ಅವರ ಮನೆಯ ಆವರಣದಲ್ಲಿ ಅತ್ಯಂತ ಅಪರೂಪದ ಹಾಗೂ ವಿರಳವಾಗಿ ಕಂಡುಬರುವ ‘ಆಲಿವ್ ನೀರು ಹಾವು’ (Olive Keelback) ಪ್ರತ್ಯಕ್ಷವಾಗಿದೆ. ವಿಷರಹಿತವಾದ ಈ ನೀರಾವು ಮನೆಯ ಅಂಗಳದಲ್ಲಿ ಸದ್ದು ಮಾಡದೆ ಕಾಣಿಸಿಕೊಂಡಿದ್ದು, ಮನೆಯವರು ತಕ್ಷಣವೇ ಉರಗ ರಕ್ಷಕ ನಾಗರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ನಾಗರಾಜ್, ಜಾಗರೂಕತೆಯಿಂದ ಹಾವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಈ ಅಪರೂಪದ ನೀರಾವನ್ನು ಸುರಕ್ಷಿತವಾಗಿ ಸಮೀಪದ ಅರಣ್ಯ ಪ್ರದೇಶಕ್ಕೆ ತಂದು ಬಿಡಲಾಗಿದೆ. ಹಾವನ್ನು ಯಶಸ್ವಿಯಾಗಿ ರಕ್ಷಿಸಿದ್ದಕ್ಕೆ ಸ್ಥಳೀಯರು ಹಾಗೂ ಅರಣ್ಯ ಪ್ರೇಮಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 02, 2026 11:26 AM

Follow Us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More