ರಣರೋಚಕ ಮ್ಯಾಚ್… ಕೊನೆಯ ಎಸೆತದಲ್ಲಿ ರನೌಟ್… 1 ರನ್ ಸೋಲು..!
MI Emirates vs Desert Vipers: ಈ ಹಂತದಲ್ಲಿ ಕ್ರೀಸ್ಗೆ ಆಗಮಿಸಿದ ರಶೀದ್ ಖಾನ್ ಪಂದ್ಯ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದರು. ಅದರಂತೆ ಕೊನೆಯ ಓವರ್ ಎಸೆದ ಖುಝೈಮ ತನ್ವೀರ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಇನ್ನು ಎರಡನೇ ಎಸೆತದಲ್ಲಿ ವೈಡ್ ಎಸೆದರು. ಮರು ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. ಇನ್ನು ಮೂರನೇ ಎಸೆತದಲ್ಲಿ ಮತ್ತೆ ವೈಡ್ ಎಸೆದರು.
ಅಬುಧಾಬಿಯಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 9ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ಹಾಗೂ ಡೆಸರ್ಟ್ ವೈಪರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಡೆಸರ್ಟ್ ವೈಪರ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದ್ದರು.
ಅದರಂತೆ 160 ರನ್ಗಳ ಗುರಿ ಪಡೆದ ಎಂಐ ಎಮಿರೇಟ್ಸ್ ಪರ ಟಾಮ್ ಬ್ಯಾಂಟನ್ 34 ರನ್ ಬಾರಿಸಿದರೆ, ನಿಕೋಲಸ್ ಪೂರನ್ 31 ರನ್ಗಳ ಕೊಡುಗೆ ನೀಡಿದರು. ಇದಾಗ್ಯೂ ಕೊನೆಯ ಓವರ್ನಲ್ಲಿ ಗೆಲ್ಲಲು 16 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ಕ್ರೀಸ್ಗೆ ಆಗಮಿಸಿದ ರಶೀದ್ ಖಾನ್ ಪಂದ್ಯ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದರು. ಅದರಂತೆ ಕೊನೆಯ ಓವರ್ ಎಸೆದ ಖುಝೈಮ ತನ್ವೀರ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಇನ್ನು ಎರಡನೇ ಎಸೆತದಲ್ಲಿ ವೈಡ್ ಎಸೆದರು. ಮರು ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. ಇನ್ನು ಮೂರನೇ ಎಸೆತದಲ್ಲಿ ಮತ್ತೆ ವೈಡ್ ಎಸೆದರು.
ಪರಿಣಾಮ ಕೊನೆಯ 4 ಎಸೆತಗಳಲ್ಲಿ ರನ್ ಬೇಕಿತ್ತು. ಈ ವೇಳೆ ರಶೀದ್ ಖಾನ್ 2 ರನ್ ಕಲೆಹಾಕಿದರು. ಇನ್ನು 4ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರು. ಮರು ಎಸೆತದಲ್ಲೇ ರಶೀದ್ ಖಾನ್ ಬ್ಯಾಟ್ನಿಂದ ಫೋರ್ ಕೂಡ ಮೂಡಿಬಂತು. ಅದರಂತೆ ಕೊನೆಯ ಎಸೆತದಲ್ಲಿ 1 ರನ್ ಕಲೆಹಾಕಿದರೆ ಪಂದ್ಯವನ್ನು ಟೈ ಮಾಡಬಹುದಿತ್ತು. ಆದರೆ ಅಂತಿಮ ಎಸೆತದಲ್ಲಿ ಒಂದು ರನ್ಗಾಗಿ ಓಡಿದ ಗಝನ್ಫರ್ ಡೈರೆಕ್ಟ್ ಹಿಟ್ನಿಂದ ರನೌಟ್ ಆದರು. ಈ ಮೂಲಕ ಬಲಿಷ್ಠ ಎಂಐ ಎಮಿರೇಟ್ಸ್ ತಂಡಕ್ಕೆ ಸೋಲುಣಿಸಿ ಡೆಸರ್ಟ್ ವೈಪರ್ಸ್ ತಂಡವು 1 ರನ್ಗಳ ರೋಚಕ ಜಯ ಸಾಧಿಸಿದೆ.
