ರಾಶಿಕಾ ಶೆಟ್ಟಿ, ಸೂರಜ್ ಲವ್ ನೋಡಿ ಕಣ್ಣರಳಿಸಿದ ಕಾಕ್ರೋಚ್ ಸುಧಿ
ರಾಶಿಕಾ ಶೆಟ್ಟಿ ಹಾಗೂ ಸೂರಜ್ ಅವರು ಬಿಗ್ ಬಾಸ್ ಮನೆಯ ಒಳಗೆ ಪ್ರೇಮಿಗಳ ರೀತಿ ಕ್ಲೋಸ್ ಆಗಿದ್ದಾರೆ. ಅಕ್ಟೋಬರ್ 27ರ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಕಾಲೇಜ್ ಕ್ಯಾಂಪಸ್ ಟಾಸ್ಕ್ನಲ್ಲಿ ಅವರ ನಡುವಿನ ಆಪ್ತತೆ ಇನ್ನಷ್ಟು ಹೆಚ್ಚಾಗಿದೆ. ವಿಡಿಯೋ ಇಲ್ಲಿದೆ ನೋಡಿ..
ಬಿಗ್ ಬಾಸ್ ಮನೆಯ ಒಳಗೆ ರಾಶಿಕಾ ಶೆಟ್ಟಿ (Rashika Shetty) ಮತ್ತು ಸೂರಜ್ ಅವರು ಪ್ರೇಮಿಗಳ ರೀತಿ ಕ್ಲೋಸ್ ಆಗಿದ್ದಾರೆ. ಅದಕ್ಕೆ ತಕ್ಕಂತೆ ಬಿಗ್ ಬಾಸ್ ಒಂದು ಹೊಸ ಟಾಸ್ಕ್ ನೀಡಿದ್ದಾರೆ. ಈ ವಾರ ಪೂರ್ತಿ ಬಿಗ್ ಬಾಸ್ (Bigg Boss Kannada Season 12) ಮನೆ ಒಂದು ಕಾಲೇಜ್ ಕ್ಯಾಂಪಸ್ ರೀತಿ ಆಗಿರಲಿದೆ. ಇದರಿಂದ ಯುವ ಹೃದಯಗಳ ನಡುವೆ ಪ್ರೀತಿ ಚಿಗುರಲು ಪ್ರೇರಣೆ ಸಿಕ್ಕಂತೆ ಆಗಿದೆ. ಈಗಾಗಲೇ ಆಪ್ತವಾಗಿರುವ ರಾಶಿಕಾ ಶೆಟ್ಟಿ ಮತ್ತು ಸೂರಜ್ (Suraj Singh) ಅವರು ಇನ್ನಷ್ಟು ಹತ್ತಿರ ಆಗಿದ್ದಾರೆ. ‘ಲೈನ್ ಹೊಡೆಯಬಹುದಾ’ ಎಂದು ಸೂರಜ್ ಕೇಳಿದ್ದಾರೆ. ಟಾಸ್ಕ್ನಲ್ಲಿ ಇಲ್ಲದೇ ಇದ್ದರೂ ಸೂರಜ್ ಹಾಗೂ ರಾಶಿಕಾ ಶೆಟ್ಟಿ ಭಾರಿ ಆಪ್ತವಾಗಿ ನಡೆದುಕೊಂಡಿದ್ದಾರೆ. ಅದನ್ನು ನೋಡಿ ಕಾಕ್ರೋಜ್ ಸುಧಿ ಅವರಿಗೆ ಅಚ್ಚರಿ ಆಗಿದೆ. ಅ.27ರ ಎಪಿಸೋಡ್ ಪ್ರೋಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
