Rashmika Mandanna: ‘ಪುಷ್ಪ’ ಚಿತ್ರಕ್ಕೆ ಕನ್ನಡದಲ್ಲಿ ಡಬ್ ಮಾಡೋಕೆ ಟೈಮ್ ಇರಲಿಲ್ಲ; ರಶ್ಮಿಕಾ ಮಂದಣ್ಣ
ಇಂದು (ಡಿಸೆಂಬರ್ 15) ಬೆಂಗಳೂರಿಗೆ ಸಿನಿಮಾ ತಂಡ ಆಗಮಿಸಿತ್ತು. ಈ ವೇಳೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ಈ ಮೇಳೆ ಮಾತನಾಡಿದ ರಶ್ಮಿಕಾ ಮಂದಣ್ಣ ಏಕೆ ಡಬ್ ಮಾಡಿಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಇಡೀ ಭಾರತಾದ್ಯಂತ ಫೇಮಸ್ ಆಗಿದ್ದಾರೆ. ಅವರಿಗೆ ಟಾಲಿವುಡ್, ಬಾಲಿವುಡ್ಗಳಲ್ಲೂ ಆಫರ್ ಇದೆ. ಕನ್ನಡದ ಬಗ್ಗೆ ಅವರು ಅಷ್ಟು ಒಲವು ತೋರುವುದಿಲ್ಲ ಎನ್ನುವ ಆಪಾದನೆ ಇದೆ. ಇದರ ಮಧ್ಯೆಯೂ ರಶ್ಮಿಕಾಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ. ‘ಪುಷ್ಪ’ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾದ ಪ್ರಚಾರಕ್ಕೆ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು ಬೆಂಗಳೂರ ಬಗ್ಗೆ ಮಾತನಾಡಿದ್ದಾರೆ. ‘ಪುಷ್ಪ’ (Pushpa) ಚಿತ್ರಕ್ಕೆ ರಶ್ಮಿಕಾ ನಾಯಕಿ. ಈ ಚಿತ್ರದಲ್ಲಿ ಅವರು ಭಿನ್ನ ಗೆಟಪ್ ತಾಳಿದ್ದಾರೆ. ಹೀಗಾಗಿ, ಅವರ ಅಭಿಮಾನಿಗಳು ಈ ಸಿನಿಮಾ ನೋಡೋಕೆ ಕಾದು ಕೂತಿದ್ದಾರೆ. ಈ ಚಿತ್ರ ತೆಲುಗು ಮಾತ್ರವಲ್ಲದೆ, ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಪ್ರಚಾರ ನೀಡಲಾಗಿದೆ. ಹೈದರಾಬಾದ್, ಚೆನ್ನೈ ಮೊದಲಾದ ಕಡೆಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಇಂದು (ಡಿಸೆಂಬರ್ 15) ಬೆಂಗಳೂರಿಗೆ ಸಿನಿಮಾ ತಂಡ ಆಗಮಿಸಿತ್ತು. ಈ ವೇಳೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ಈ ಮೇಳೆ ಮಾತನಾಡಿದ ರಶ್ಮಿಕಾ ಮಂದಣ್ಣ ಏಕೆ ಡಬ್ ಮಾಡಿಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Rashmika Mandanna: ‘ನಮ್ಮ ಊರಿಗೆ ಬಂದು ತುಂಬಾ ಸಮಯವಾಯ್ತು’; ಬೆಂಗಳೂರ ಬಗ್ಗೆ ರಶ್ಮಿಕಾ ಮಂದಣ್ಣ ಮಾತು