‘ರಶ್ಮಿಕಾಗೆ ಭದ್ರತೆ ನೀಡಿ’; ಕೇಂದ್ರಕ್ಕೆ ಮನವಿ ಮಾಡಿದ ಕೊಡವ ಸಮುದಾಯ
ರಶ್ಮಿಕಾ ಮಂದಣ್ಣ ಅವರ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಅವರ ವಿರುದ್ಧ ರವಿಕುಮಾರ್ ಗಾಣಿಗ ಅವರು ದೂರು ಸಲ್ಲಿಕೆ ಮಾಡಿದ್ದರು. ಈಗ ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡಿ ಎನ್ನುವ ಕೊರಿಕೆಯನ್ನು ಇಡಲಾಗಿದೆ. ಕೊಡವ ಸಮುದಾಯದ ಕಡೆಯಿಂದ ಹೀಗೊಂದು ಮನವಿ ಸಲ್ಲಿಕೆ ಆಗಿದೆ.
ರಶ್ಮಿಕಾ ಮಂದಣ್ಣ ಅವರ ವಿರುದ್ಧ ಶಾಸಕ ರವಿಕುಮಾರ್ ಗಣಿಗ ಧ್ವನಿ ಎತ್ತಿದ್ದರು. ಅವರ ವಿರುದ್ಧದ ಹೇಳಿಕೆ ಬಳಿಕ ಕೊಡವ ನ್ಯಾಷನಲ್ ಸಂಘಟನೆಯ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಭದ್ರತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜಾತಿ ವಿಚಾರಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.