Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಮಂಡಲದ ಕಲಾಪ ವೀಕ್ಷಿಸಲು ಬರುವ ಶಾಲಾಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಸಿಗಬೇಕು

ವಿಧಾನಮಂಡಲದ ಕಲಾಪ ವೀಕ್ಷಿಸಲು ಬರುವ ಶಾಲಾಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಸಿಗಬೇಕು

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 10, 2025 | 12:07 PM

ಸದನದಲ್ಲಿ ಜನಪ್ರತಿನಿಧಿಗಳು ಆಡುವ ಮಾತು ಬಳಸುವ ಭಾಷೆ ಚರ್ಚೆಗೆ ಗ್ರಾಸವಾಗಿದೆ. ಯಾರನ್ನೂ ಗುರಿಯಾಗಿಸಿಕೊಂಡು ಇದನ್ನು ಹೇಳುತ್ತಿಲ್ಲ. ವಿರೋಧಪಕ್ಷದವರು ಭಾಷೆಯ ಬಳಕೆಯಲ್ಲಿ ಎಡವಿದರೆ ಆಡಳಿತ ಪಕ್ಷದವರೂ ಅದನ್ನೇ ಮಾಡುತ್ತಾರೆ. ಮಕ್ಕಳು ಕೆಟ್ಟದ್ದನ್ನು ಅಲ್ಲೇಬಿಟ್ಟು ಒಳ್ಳೆಯದನ್ನು ಮಾತ್ರ ಆರಿಸಿಕೊಳ್ಳುವಷ್ಟು ಪ್ರಭುದ್ಧತೆ ತೋರಿದರೆ ಅದೇ ಒಳ್ಳೇದು.

ಬೆಂಗಳೂರು, ಮಾರ್ಚ್ 10: ಶಾಲಾ ವಿದ್ಯಾರ್ಥಿಗಳು ವಿಧಾನ ಮಂಡಲದ ಕಲಾಪ ವೀಕ್ಷಿಸಲು ಬರೋದು ಹೊಸದೇನಲ್ಲ, ಮಕ್ಕಳು ಆಗಾಗ ಬಂದು ಅಧಿವೇಶನ ವೀಕ್ಷಿಸುತ್ತಾರೆ. ಆದರೆ ಕಲಾಪ ನಡೆಯುವಾಗ ಮಕ್ಕಳಿಗೆ ಏನು ನೋಡಲು ಸಿಗುತ್ತದೆ ಅನ್ನೋದು ಬಹಳ ಮುಖ್ಯ. ಇವತ್ತಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು ಅಂತ ಹೇಳುತ್ತಾರೆ. ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಪೂರಕವಾದ ಸನ್ನಿವೇಶಗಳು ಮಕ್ಕಳಿಗೆ ಸದನದಲ್ಲಿ ಸಿಗುತ್ತವೆಯೇ? ವಾಸ್ತವತೆಯನ್ನು ನಾವು ಕಲಾಪ ನಡೆಯುವ ಸಂದರ್ಭಗಳಲ್ಲಿ ನೋಡುತ್ತಿರುತ್ತೇವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Budget 2025; ಸಿದ್ದರಾಮಯ್ಯ ರೈತನ ಬೆನ್ನೆಲುಬನ್ನೇ ಮುರಿದಿದ್ದಾರೆ, ನಿರಾಶಾದಾಯಕ ಬಜೆಟ್: ರೈತ ಮುಖಂಡ

Published on: Mar 10, 2025 11:54 AM