Karnataka Budget 2025; ಸಿದ್ದರಾಮಯ್ಯ ರೈತನ ಬೆನ್ನೆಲುಬನ್ನೇ ಮುರಿದಿದ್ದಾರೆ, ನಿರಾಶಾದಾಯಕ ಬಜೆಟ್: ರೈತ ಮುಖಂಡ
ಕಬ್ಬು ಬೆಳೆಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಇನ್ನೊಬ್ಬ ರೈತ ಮುಖಂಡ ಹೇಳಿದರು. ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಬಾಕಿ ಎರಡು ವರ್ಷಗಳಿಂದ ಸುಮಾರು ₹950 ಕೋಟಿ ಇದೆ, ಅದರ ಬಗ್ಗೆ ಒಂದು ಮಾತನ್ನೂ ಸಿದ್ದರಾಮಯ್ಯ ಆಡಲಿಲ್ಲ, ರೈತ ಮೂಳೆಯನ್ನೇ ಮುರಿದರೆ ದೇಶದ ಬೆನ್ನೆಲುಬು ಹೇಗಾದಾನು ಎಂದು ಅವರು ಪ್ರಶ್ನಿಸಿದರು
ಮೈಸೂರು,ಮಾರ್ಚ್ 7 : ಮುಖ್ಯಮಂತ್ರಿ ಸಿದ್ದರಾಮಯ್ಯ ರೈತನ ಮಗ, ರೈತರ ಪರ ಅಂತ ಹೇಳೋದಷ್ಟೇ ಬಂತು, ಅದರೆ ರೈತರಿಗಾಗಿ ಬಜೆಟ್ನಲ್ಲಿ ಏನನ್ನೂ ನೀಡಿಲ್ಲ ಎಂದು ಮೈಸೂರು ಭಾಗದ ರೈತರು (farmers of Mysuru region) ತೀವ್ರ ಅಸಮಾಧಾನ ಹೊರಹಾಕಿದ್ದಾರೆ. 4 ಲಕ್ಷ ಕೋಟಿ ಗಾತ್ರದ ಬಜೆಟ್ ನಲ್ಲಿ ₹10,000 ಕೋಟಿ ರೈತರಿಗೆ ಮೀಸಲಿಟ್ಟರೆ ಹೇಗೆ ಸಾಕಾದೀತು? ಮುಖ್ಯಮಂತ್ರಿಯವರು ನಿಜವಾಗಿಯೂ ನುಡಿದಂತೆ ನಡೆದಿದ್ದಾರೆ, ತಮ್ಮೊಂದಿಗೆ ನಡೆಸಿದ ಸಭೆಯಲ್ಲಿ ಅವರು ರೈತರ ಎಲ್ಲ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗಲ್ಲ ಎಂದು ಹೇಳಿದ್ದರು, ಹೇಳಿದ್ದನ್ನೇ ಮಾಡಿದ್ದಾರೆ ಎಂದು ಒಬ್ಬ ರೈತ ಮುಖಂಡ ಬೇಸರ ವ್ಯಕ್ತಪಡಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್ಗೆ ನೂರಕ್ಕೆ ನೂರು ಮಾರ್ಕ್ಸ್ ಕೊಟ್ಟ ಬಿಜೆಪಿ ಶಾಸಕರು
Published on: Mar 07, 2025 04:55 PM
Latest Videos