Karnataka Budget 2025; ಸಿದ್ದರಾಮಯ್ಯ ಮಾತ್ರವಲ್ಲ, ಕಾಂಗ್ರೆಸ್ ಸರ್ಕಾರಕ್ಕೆ ಇದು ಕೊನೆಯ ಬಜೆಟ್: ಬಸನಗೌಡ ಯತ್ನಾಳ್
ಗುತ್ತಿಗೆಯಲ್ಲಿ ಮುಸ್ಲಲ್ಮಾನರಿಗೆ ಶೇಕಡ 4ರಷ್ಟು ಮೀಸಲಾತಿ ನೀಡಿರುವುದನ್ನು ತೀವ್ರವಾಗಿ ಖಂಡಿಸಿದ ಬಸನಗೌಡ ಯತ್ನಾಳ್, ಇದು ನಿಜಕ್ಕೂ ದುರ್ದೈವ, ಧರ್ಮಾಧಾರಿತ ಮೀಸಲಾತಿಯನ್ನು ಕೊಡಲು ಬರೋದಿಲ್ಲ, ತಾವು ಸರ್ಕಾರದ ಈ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದರು. ಬಜೆಟ್ಗೆ ಮೊದಲು ಸಹ ಯತ್ನಾಳ್ ಇದೇ ಪ್ರತಿಕ್ರಿಯೆ ನೀಡಿದ್ದರು.
ಬೆಂಗಳೂರು, ಮಾರ್ಚ್ 7: ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊನೆಯ ಬಜೆಟ್ ಅಂತ ತಾನು ಹೇಳಲ್ಲ, ಅದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ್ದೇ (Congress government) ಕೊನೆಯ ಬಜೆಟ್ ಅಂತ ಹೇಳುತ್ತೇನೆ ಎಂದು ಹಿರಿಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಜಗಳಗಳನ್ನು ನೋಡುತ್ತಿದ್ದರೆ ಇದೇ ಸರ್ಕಾರದ ಕೊನೆಯ ಬಜೆಟ್ ಆಗಬಹುದು ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget 2025 Highlights: ಕರ್ನಾಟಕ ರಾಜ್ಯ ಬಜೆಟ್ನ ಮುಖ್ಯಾಂಶಗಳು
Latest Videos