ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಕಲಾಪದಲ್ಲಿ ಹೀಗೆಂದಿದ್ದೇಕೆ ಅಶೋಕ್? ಪಾಟೀಲ್ ಪ್ರತಿಕ್ರಿಯೆ ಏನಿತ್ತು ನೋಡಿ

ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಕಲಾಪದಲ್ಲಿ ಹೀಗೆಂದಿದ್ದೇಕೆ ಅಶೋಕ್? ಪಾಟೀಲ್ ಪ್ರತಿಕ್ರಿಯೆ ಏನಿತ್ತು ನೋಡಿ

Ganapathi Sharma
|

Updated on: Dec 13, 2024 | 3:07 PM

ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಒಂದೆಡೆ ಪಂಚಮಸಾಲಿ ಮೀಸಲಾತಿ ಹೋರಾಟದ ಚರ್ಚೆಯಿಂದ ಗಮನ ಸೆಳೆದಿದ್ದರೆ ಮತ್ತೊಂದೆಡೆ ನಾಯಕರ ಸ್ವಾರಸ್ಯಕರ ಚರ್ಚೆಗಳಿಂದಲೂ ಗಮನ ಸೆಳೆಯುತ್ತಿದೆ. ಗುರುವಾರವಷ್ಟೇ ಜ್ಯೋತಿಷ್ಯದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಇದೀಗ ಆರ್ ಅಶೋಕ್ ಭಗವದ್ಗೀತೆ ಸಾಲುಗಳನ್ನು ನೆನಪಿಸಿದ್ದಾರೆ.

ಬೆಳಗಾವಿ, ಡಿಸೆಂಬರ್ 13: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪದ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಸಚಿವ ಹೆಚ್​ಕೆ ಪಾಟೀಲ್ ಮಧ್ಯೆ ಭಗವದ್ಗೀತೆ ಶ್ಲೋಕಗಳ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಮಾತು ಆರಂಭಿಸಿದ ಅಶೋಕ್, ಅಂತೂ ಇಂತು 4 ದಿನ ಆದಮೇಲೆ ನಮಗೆ ಮಾತನಾಡಲು ಅವಕಾಶ ಕೊಟ್ಟಿದ್ದೀರಿ. ಅದೂ ಕೂಡ ಹೊಡೆದಾಟ, ಹೋರಾಟ ಮಾಡಿದ ಮೇಲೆ. ಧನ್ಯವಾದ ಎಂದರು.

ಮಾತು ಮುಂದುವರಿಸಿ, ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಎನ್ನುವ ಹಾಗೆ ಆಯ್ತು ನಮ್ಮ ಪರಿಸ್ಥಿತಿ. ಹೋರಾಟ ಮಾಡಿ ಮಾತನಾಡಲು ಅವಕಾಶ ಪಡೆಯುವಂತಾಯ್ತು. ಭಗವದ್ಗೀತೆಯಲ್ಲಿ ಒಂದು ಮಾತಿದೆ. ಮದವೇರಿದಾಗ ಒಂದು ಗಂಟೆ ಸ್ಮಶಾನಕ್ಕೆ ಸುತ್ತು ಹಾಕಿ ಬರಬೇಕಂತೆ. ಅಲ್ಲಿಗೆ ಹೋದಾಗ ಯಾರೆಲ್ಲ ಯಾವಾಗ ಯಾವ ರೀತಿ ಮೆರೆದಿದ್ದರೋ ಅವರೆಲ್ಲ ಏನಾದರು ಎಂಬುದು ಅರಿವಿಗೆ ಬರುತ್ತದೆ. ಆಗ ನಮ್ಮ ಮದ ಇಳಿಯುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್​ಕೆ ಪಾಟೀಲ್, ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂದೂ ಭಗವದ್ಗೀತೆಯಲ್ಲಿ ಹೇಳಿದ್ದಾರೆ ಎಂದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ