ಡಿಕೆ ಶಿವಕುಮಾರ್​ಗೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪುತ್ರಿ ಐಶ್ವರ್ಯರಿಂದ ಅತ್ಯಂತ ಅರ್ಥಗರ್ಭಿತ ಮಾತು!

|

Updated on: Apr 26, 2024 | 4:34 PM

ಅವರಿಗೇನಾದರೂ ರಾಜಕಾರಣಕ್ಕೆ ಬರುವ ಯೋಚನೆಯಿದೆಯೇ? ಖಂಡಿತ ಇಲ್ಲ ಎಂದ ಐಶ್ವರ್ಯ, ತಾನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಅದರಲ್ಲೇ ಐಕಾನ್ ಅನಿಸಿಕೊಂಡು ಸಾಧನೆ ಮಾಡುವ ಗುರಿಯಿಟ್ಟುಕೊಂಡಿದ್ದೇನೆ, ಸರ್ಕಾರದ ಶೈಕ್ಷಣಿಕ ಕಾರ್ಯಕ್ರಮ ಮತ್ತು ಯೋಜನೆಗಳಲ್ಲಿ ಭಾಗೀದಾರಳಾಗುವ ಆಸೆಯಿದೆ ಎಂದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂದು ತಮ್ಮ ಮತದಾನದ ಹಕ್ಕು ಚಲಾಯಿಸಿದ ಬಳಿಕ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಡಿಕೆ ಶಿವಕುಮಾರ್ (DK Shivakumar) ಅವರ ಪುತ್ರಿ ಐಶ್ವರ್ಯ (Aishwarya), ತಮ್ಮ ತಂದೆ ಮುಖ್ಯಮಂತ್ರಿಯಾಗುವ ಬಗ್ಗೆ ಕೇಳಿದ ಪ್ರಶ್ನೆಗೆ ಅರ್ಥಗರ್ಭಿತವಾದ ಉತ್ತರ ನೀಡಿದರು. ರಾಜ್ಯದಲ್ಲಿ ಒಬ್ಬರು ಸಿಎಂ ಹುದ್ದೆಯಲ್ಲಿ (CM post) ಕುಳಿತು ರಾಜ್ಯವನ್ನು ಮುನ್ನಡೆಸುತ್ತಿರುವಾಗ ಬೇರೆ ಸಿಎಂ ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ, ಈಗಿನ ಮುಖ್ಯಮಂತ್ರಿ ಮಾಡುತ್ತ್ತಿರುವ ಕೆಲಸಗಳನ್ನು ಮತ್ತು ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಸುವ ಕೆಲಸ ಮಾಡಬೇಕು, ತಮ್ಮ ತಂದೆಯವರ ಸಾಮರ್ಥ್ಯ ಮತ್ತು ಅವರ ಕೆಲಸಗಳ ಹಿನ್ನೆಲೆ ಜೊತೆ ಅದೃಷ್ಟವಿದ್ದರೆ ಮುಂದೊಂದು ದಿನ ಸಿಎಂ ಆಗಬಹುದು, ಸದ್ಯಕ್ಕೆ ಅದರ ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ ಎಂದು ಐಶ್ವರ್ಯ ಹೇಳಿದರು. ಅವರಿಗೇನಾದರೂ ರಾಜಕಾರಣಕ್ಕೆ ಬರುವ ಯೋಚನೆಯಿದೆಯೇ? ಖಂಡಿತ ಇಲ್ಲ ಎಂದ ಐಶ್ವರ್ಯ, ತಾನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಅದರಲ್ಲೇ ಐಕಾನ್ ಅನಿಸಿಕೊಂಡು ಸಾಧನೆ ಮಾಡುವ ಗುರಿಯಿಟ್ಟುಕೊಂಡಿದ್ದೇನೆ, ಸರ್ಕಾರದ ಶೈಕ್ಷಣಿಕ ಕಾರ್ಯಕ್ರಮ ಮತ್ತು ಯೋಜನೆಗಳಲ್ಲಿ ಭಾಗೀದಾರಳಾಗುವ ಆಸೆಯಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಯತ್ನ: ಡಿಸಿಎಂ ಡಿಕೆ ಶಿವಕುಮಾರ್ ಗಂಭೀರ ಆರೋಪ

Follow us on