ಸಮಸ್ಯೆಗಳ ಹೊರೆಯಿಂದ ಜರ್ಜರಿತ ಸಿದ್ದರಾಮಯ್ಯ ಸಂಕಷ್ಟ ಪರಿಹಾರಕ್ಕಾಗಿ ಮಲೆ ಮಹದೇಶ್ವರನ ಮೊರೆ ಹೊಕ್ಕರು!
ಮಂಗಳವಾರ ತಡರಾತ್ರಿ ಸಿದ್ದರಾಮಯ್ಯ ಸಚಿವ ಹೆಚ್ ಸಿ ಮಹದೇವಪ್ಪ ಅವರೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸಮಯ ಮಧ್ಯರಾತ್ರಿ ಮೀರಿದ್ದರೂ ದೊಡ್ಡ ಸಂಖ್ಯೆಯಲ್ಲಿ ಜನ ಅವರಿಗಾಗಿ ಕಾಯುತ್ತಾ ನಿಂತಿದ್ದು ಮತ್ತು ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯದ ಮೂಲಕ ಅವರನ್ನು ಸ್ವಾಗತಿಸಿದ್ದು ಉಲ್ಲೇಖನೀಯ.
ಚಾಮರಾಜನಗರ: ಮಳೆಯ ಕೊರತೆ, ರಾಜ್ಯದೆಲ್ಲೆಡೆ ಬರದ ಸ್ಥಿತಿ, ಜಲಾಶಯಗಳೆಲ್ಲ ಖಾಲಿಯಾಗಿದ್ದರೂ ನೆರೆ ರಾಜ್ಯಕ್ಕೆ ನೀರು ಬಿಡುವಂತೆ ಪ್ರಾಧಿಕಾರ ಮತ್ತು ನ್ಯಾಯಾಲಯದ ಆದೇಶ, ಕಾವೇರಿ ನೀರಿಗಾಗಿ ನಿಲ್ಲದ ಪ್ರತಿಭಟನೆ (protests for Cauvery water) ಮತ್ತು ಬಂದ್ ಗಳು, ನೀರು ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ ಅಂತ ವಿರೋಧ ಪಕ್ಷಗಳ ದಾಳಿ, ಗ್ಯಾರಂಟಿ ಯೋಜನೆಗಳಿಂದ (guarantee schemes) ಬರಿದಾಗುತ್ತಿರುವ ರಾಜ್ಯ ಬೊಕ್ಕಸ-ಇಂಥ ಸಂಕಷ್ಟಗಳ ಸರಮಾಲೆಗೆ ಸಿಲುಕಿರುವ ರಾಜ್ಯವೊಂದರ ಮುಖ್ಯಮಂತ್ರಿ ದೇವರ ಮೊರೆ ಹೋಗುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಸಿದ್ದರಾಮಯ್ಯ (Siddaramaiah) ಮಾಡಿದ್ದು ಅದನ್ನೇ. ಮಂಗಳವಾರ ತಡರಾತ್ರಿ ಅವರು ತಮ್ಮ ಆಪ್ತ, ಸಚಿವ ಹೆಚ್ ಸಿ ಮಹದೇವಪ್ಪ (HC Mahadevappa) ಅವರೊಂದಿಗೆ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸಮಯ ಮಧ್ಯರಾತ್ರಿ ಮೀರಿದ್ದರೂ ದೊಡ್ಡ ಸಂಖ್ಯೆಯಲ್ಲಿ ಜನ ಅವರಿಗಾಗಿ ಕಾಯುತ್ತಾ ನಿಂತಿದ್ದು ಮತ್ತು ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯದ ಮೂಲಕ ಅವರನ್ನು ಸ್ವಾಗತಿಸಿದ್ದು ಉಲ್ಲೇಖನೀಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ