Smriti Mandhana: ಸ್ಮೃತಿ ಮಂಧಾನ ಸ್ಫೋಟಕ ಸಿಕ್ಸ್ ಕಂಡು ದಂಗಾದ ಆರ್ಸಿಬಿ ಫ್ಯಾನ್ಸ್: ವಿಡಿಯೋ ನೋಡಿ
Royal Challengers Bangalore Women vs Delhi Capitals Women: ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಒಟ್ಟು 43 ಎಸೆತಗಳಲ್ಲಿ 74 ರನ್ ಗಳಿಸಿದರು. ಇದರಲ್ಲಿ 3 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿದ್ದವು. ಮಂಧಾನ ಸಿಡಿಸಿದ ಸಿಕ್ಸ್ ನೋಡಲು ಮನಮೋಹಕವಾಗಿತ್ತು. ಆರ್ಸಿಬಿ ಅಭಿಮಾನಿಗಳಂತು ಇದನ್ನೂ ಎಂಜಾಯ್ ಮಾಡಿದರು.
ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ (Smriti Mandhana) ಭರ್ಜರಿ ಫಾರ್ಮ್ನಲ್ಲಿದ್ದಾರೆ. ಗುರುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 195 ರನ್ ಚೇಸ್ ಮಾಡುವಾಗ ಮಂಧಾನ ಅದ್ಭುತ ಇನ್ನಿಂಗ್ಸ್ ಆದರುರೆ. ಮೊದಲ ವಿಕೆಟ್‌ಗೆ ಸೋಫಿ ಡಿವೈನ್ ಅವರೊಂದಿಗೆ 77 ರನ್‌ಗಳ ಜೊತೆಯಾಟ ಆಡಿ ಸ್ಫೋಟಕ ಆರಂಭ ಒದಗಿಸಿದರು. ಜೊತೆಗೆ ತಮ್ಮ ಮೊದಲ ಅರ್ಧಶತಕವನ್ನು ಕೂಡ ಗಳಿಸಿದರು. ಸ್ಮೃತಿ ಒಟ್ಟು 43 ಎಸೆತಗಳಲ್ಲಿ 74 ರನ್ ಗಳಿಸಿದರು. ಈ ಇನ್ನಿಂಗ್ಸ್ ಅನ್ನು 172.09 ಸ್ಟ್ರೈಕ್ ರೇಟ್‌ನೊಂದಿಗೆ ಆಡಿದರು. 3 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿದ್ದವು. ಮಂಧಾನ ಸಿಡಿಸಿದ ಸಿಕ್ಸ್ ನೋಡಲು ಮನಮೋಹಕವಾಗಿತ್ತು. ಆರ್ಸಿಬಿ ಅಭಿಮಾನಿಗಳಂತು ಇದನ್ನೂ ಎಂಜಾಯ್ ಮಾಡಿದರು. ಆದರೆ, ಈ ಮ್ಯಾಚ್ನಲ್ಲಿ ಬೆಂಗಳೂರು ತಂಡ ಸೋತಿತು.ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಿದರೆ, ಆರ್ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿಷ್ಟೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ