ಐಪಿಎಲ್ ಫೈನಲ್: ಆರ್​ಸಿಬಿ ಗೆಲುವಿಗೆ ಮಂಡ್ಯದ ಅಭಿಮಾನಿಯಿಂದ ಉರುಳು ಸೇವೆ!

Updated on: Jun 03, 2025 | 10:22 AM

ಅಭಿಮಾನಿಗಳ ಕಣ್ಣೆಲ್ಲ ವಿರಾಟ್ ಕೊಹ್ಲಿ ಮೇಲಿದೆ. ವಿರಾಟ್ ಮಿಂಚಿದರೆ ಕಪ್ ನಮ್ಮದೇ ಅನ್ನೋ ಭಾವನೆ ಅಭಿಮಾನಿಗಳದ್ದು. ಟೀಮಿಗಾಗಿ ಪೂಜೆ ಮಾಡಿಸಿದವರು ಕೊಹ್ಲಿಗೆ ಜೈಕಾರ ಹಾಕುತ್ತಿದ್ದಾರೆ. ಉರುಳು ಸೇವೆಯ ನಂತರ ಮತ್ತೊಬ್ಬ ಅಭಿಮಾನಿ ಈಡುಗಾಯಿ ಹೊಡೆಯುತ್ತಾರೆ. ರಾಜ್ಯದ ನಾನಾ ಭಾಗಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಮತ್ತು ಅರ್​ಸಿಬಿ ಅಭಿಮಾನಿಗಳು ಪೂಜೆ, ಹೋಮ, ಹವನ ಮಾಡಿಸುತ್ತಿದ್ದಾರೆ.

ಮಂಡ್ಯ, ಜೂನ್ 3: ಕರ್ನಾಟಕದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿರುವ ಫ್ಯಾನ್ ಫಾಲೋಯಿಂಗನ್ನು ಪದಗಳಲ್ಲಿ ಬಣ್ಣಿಸಲಾಗದು. ಒಬ್ಬೊಬ್ಬರದು ಒಂದೊಂದು ಬಗೆಯ ಅಭಿಮಾನ, ಪ್ರೀತಿ. ಇವತ್ತು ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 18ನೇ ಸೀಸನ್ನಿನ ಫೈನಲ್ ಪಂದ್ಯ ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಂಡ್ಯ ನಗರದಲ್ಲಿ ಆರ್​ಸಿಬಿ ಅಭಿಮಾನಿಗಳ ಗುಂಪೊಂದು ಶಕ್ತಿದೇವತೆ ಕಾಳಿಕಾಂಬ ದೇವಸ್ಥಾನದಲ್ಲಿ ಅರ್​ಸಿಬಿ ತಂಡದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿತು ಮತ್ತು ಒಬ್ಬ ಅಭಿಮಾನಿ ಉರುಳು ಸೇವೆ ಸಲ್ಲಿಸಿ, ವಿರಾಟ್​ ಕೊಹ್ಲಿ ತಂಡದ ಯಶಕ್ಕಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ:  IPL 2025: ಆರ್​ಸಿಬಿ ಕ್ಯಾಂಪ್ ಸೇರಿಕೊಂಡ ಕೊಹ್ಲಿ; ಕಿಂಗ್ ರಾಯಲ್ ಎಂಟ್ರಿ ಹೇಗಿತ್ತು? ವಿಡಿಯೋ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ