“ಇದು ನಮ್ಮ ಮೈದಾನ, ನಮ್ಮ ಹವಾ!”: ಆರ್​ಸಿಬಿ ಅಭಿಮಾನಿ ಅಬ್ಬರಕ್ಕೆ ಸಿಎಸ್​​ಕೆ ಫ್ಯಾನ್ಸ್ ಗಪ್​​​​ಚುಪ್

Updated on: Apr 06, 2026 | 7:49 AM

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB vs CSK ಪಂದ್ಯದಲ್ಲಿ, ಕೆಂಪು ಜೆರ್ಸಿ ಧರಿಸಿದ್ದ RCB ಅಭಿಮಾನಿ ಯುವತಿಯೊಬ್ಬರು ಭರ್ಜರಿ ಸಿಕ್ಸರ್ ನಂತರ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ. ಎದುರಿಗಿದ್ದ CSK ಅಭಿಮಾನಿಗಳತ್ತ ನೋಡಿ ಆಕೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದು, "ನಮ್ಮ ಬೆಂಗಳೂರು, ನಮ್ಮ ಹವಾ" ಎಂದು RCB ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಬೆಂಗಳೂರು, ಏ. 6: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯವು ಕೇವಲ ಮೈದಾನಕ್ಕಷ್ಟೇ ಸೀಮಿತವಾಗಿರಲಿಲ್ಲ, ಗ್ಯಾಲರಿಯಲ್ಲೂ ಅಭಿಮಾನಿಗಳ ನಡುವೆ ಭಾರಿ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಪಂದ್ಯದ ವೇಳೆ ಆರ್‌ಸಿಬಿ ತಂಡವು ಭರ್ಜರಿ ಸಿಕ್ಸರ್ ಸಿಡಿಸಿದಾಗ ಕೆಂಪು ಜರ್ಸಿ ತೊಟ್ಟಿದ್ದ ಆರ್‌ಸಿಬಿ ಅಭಿಮಾನಿ ಯುವತಿಯೊಬ್ಬರು ಸಂಭ್ರಮಿಸಿದ ರೀತಿ ಈಗ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ತಮ್ಮ ಎದುರಿಗೇ ಕುಳಿತಿದ್ದ ಹಳದಿ ಜರ್ಸಿ ತೊಟ್ಟ ಸಿಎಸ್‌ಕೆ ಅಭಿಮಾನಿಗಳತ್ತ ನೋಡಿ ಆಕೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಆರ್‌ಸಿಬಿ ತಂಡದ ಪವರನ್ನು ಪ್ರದರ್ಶಿಸಿದ್ದಾರೆ. ವಿಡಿಯೋದಲ್ಲಿ ಕಂಡುಬರುವಂತೆ, ಸಿಎಸ್‌ಕೆ ಅಭಿಮಾನಿಗಳು ಮೌನವಾಗಿದ್ದರೂ, ಆರ್‌ಸಿಬಿ ಯುವತಿ ಮಾತ್ರ ಎದೆಯುಬ್ಬಿಸಿ “ಆರ್‌ಸಿಬಿ.. ಆರ್‌ಸಿಬಿ..” ಎಂದು ಕೂಗುತ್ತಾ ಕುಣಿದಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು “ನಮ್ಮ ಬೆಂಗಳೂರು, ನಮ್ಮ ಹವಾ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿ ಇಡೀ ಕೆಂಪು ಬಣ್ಣದಿಂದ ತುಂಬಿಹೋಗಿದ್ದು, ಅಭಿಮಾನಿಗಳ ಕಿರುಚಾಟಕ್ಕೆ ಕ್ರೀಡಾಂಗಣವೇ ನಡುಗುತ್ತಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More