‘ಅದು ತುಂಬಾ ನಂಬಿಕೆ ಇರೋ ಜಾಗ, ಆ ಬಗ್ಗೆ ಮಾತನಾಡಬಾರದು’; ದೈವಗಳ ಬಗ್ಗೆ ಉಪೇಂದ್ರ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Oct 20, 2022 | 11:05 AM

ಈಗ ಉಪೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅದು ತುಂಬಾ ನಂಬಿಕೆ ಇರೋ ಜಾಗ, ಆ ಬಗ್ಗೆ ಮಾತನಾಡಬಾರದು’ ಎಂದು ಹೇಳಿದ್ದಾರೆ.

‘ಕಾಂತಾರ’ ಸಿನಿಮಾದಲ್ಲಿ (Kantara Movie) ಹೇಳಲಾದ ಕೆಲ ವಿಚಾರಗಳ ಬಗ್ಗೆ ‘ಆ ದಿನಗಳು’ ಚೇತನ್ ಅವರು ಅಪಸ್ವರ ತೆಗೆದಿದ್ದಾರೆ. ಭೂತಕೋಲ ಹಿಂದು ಸಂಸ್ಕೃತಿಗೆ ಸೇರುತ್ತದೆ ಎಂದು ರಿಷಬ್ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದರು. ಆದರೆ, ಇದನ್ನು ಚೇತನ್ ಅವರು ವಿರೋಧಿಸಿದ್ದಾರೆ. ಈಗ ಉಪೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅದು ತುಂಬಾ ನಂಬಿಕೆ ಇರೋ ಜಾಗ, ಆ ಬಗ್ಗೆ ಮಾತನಾಡಬಾರದು’ ಎಂದು ಹೇಳಿದ್ದಾರೆ. ಉಪೇಂದ್ರ ಅವರು ಕರಾವಳಿಯವರು. ಹೀಗಾಗಿ ಈ ಆಚರಣೆಗಳ ಬಗ್ಗೆ ತಮಗೆ ಸಾಕಷ್ಟು ನಂಬಿಕೆ ಇರುವುದಾಗಿ ಹೇಳಿದ್ದಾರೆ.