Karnataka Assembly Polls 2023: ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತ ಬಿ ಯೋಗೀಶ್ ಬಾಬು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ!

Karnataka Assembly Polls 2023: ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತ ಬಿ ಯೋಗೀಶ್ ಬಾಬು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 08, 2023 | 10:25 AM

ಕ್ಷೇತ್ರದ ಬಿಜಿ ಕೆರೆ ಗ್ರಾಮದಲ್ಲಿ ಮಾತಾಡುವಾಗ ಗದ್ಗದಿತರಾದ ಯೋಗೀಶ್ ಬೆಂಬಲಿಗರ ಆಶಯದಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ (Molakalmuru constituency) ಕಾಂಗ್ರೆಸ್ ಪಾಳೆಯದಲ್ಲಿ ಬಂಡಾಯ ತಲೆದೋರಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಮತ್ತು ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಡಾ ಬಿ ಯೋಗೀಶ್ ಬಾಬು (Dr Yogesh Babu) ಬಂಡೆದಿದ್ದಾರೆ. ಅವರ ಕೋಪ, ಅಸಮಾಧಾನ ಸಹಜವೇ. ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ಅವರನ್ನು ಕಡೆಗಣಿಸಿ ಕೇವಲ ಒಂದುವಾರದ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಎನ್ ವೈ ಗೋಪಾಲಕೃಷ್ಣಗೆ (NY Gopalakrishna) ಟಿಕೆಟ್ ನೀಡಲಾಗಿದೆ. ಹೈಕಮಾಂಡ್ ನಿರ್ಧಾರದಿಂದ ತೀವ್ರವಾಗಿ ನೊಂದಿರುವ ಯೋಗೀಶ್ ಬಾಬು ಪಕ್ಷೇತರನಾಗಿ ಕಣಕ್ಕಿಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಕ್ಷೇತ್ರದ ಬಿಜಿ ಕೆರೆ ಗ್ರಾಮದಲ್ಲಿ ಮಾತಾಡುವಾಗ ಗದ್ಗದಿತರಾದ ಯೋಗೀಶ್ ಬೆಂಬಲಿಗರ ಆಶಯದಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ