ಹೊಸ ವರ್ಷಾಚರಣೆ ವೇಳೆ ಪುಂಡಾಟಿಕೆ; ಪುಂಡರಿಗೆ ಸಖತ್ ಕ್ಲಾಸ್ ತಗೊಂಡ ಮಣಿಪಾಲ ಸರ್ಕಲ್ ಇನ್ಸ್ಪಕ್ಟರ್
ಹೊಸ ವರ್ಷಾಚರಣೆ(New Year) ಸಂದರ್ಭ ಪುಂಡಾಟಿಕೆ ಮಾಡಿದ್ದ ಯುವಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣಿಪಾಲ ಠಾಣೆ ವ್ಯಾಪ್ತಿಯ ಸಿಂಡಿಕೇಟ್ ಸರ್ಕಲ್ನಿಂದ ಕಾಯಿನ್ ಸರ್ಕಲ್ ವರೆಗೆ ದ್ವಿಚಕ್ರ ವಾಹನಗಳಲ್ಲಿ ಈ ಯುವಕರು ಬೇಕಾಬಿಟ್ಟಿ ರೈಡ್ ಮಾಡಿ ಮಸ್ತಿ ಮಾಡಿದ್ದರು.
ಉಡುಪಿ, ಜ.02: ಹೊಸ ವರ್ಷಾಚರಣೆ(New Year) ಸಂದರ್ಭ ಪುಂಡಾಟಿಕೆ ಮಾಡಿದ್ದ ಯುವಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಣಿಪಾಲ ಠಾಣೆ ವ್ಯಾಪ್ತಿಯ ಸಿಂಡಿಕೇಟ್ ಸರ್ಕಲ್ನಿಂದ ಕಾಯಿನ್ ಸರ್ಕಲ್ ವರೆಗೆ ದ್ವಿಚಕ್ರ ವಾಹನಗಳಲ್ಲಿ ಈ ಯುವಕರು ಬೇಕಾಬಿಟ್ಟಿ ರೈಡ್ ಮಾಡಿ ಮಸ್ತಿ ಮಾಡಿದ್ದರು. ಅಕ್ರಮ ಕೂಟ ಮಾಡಿಕೊಂಡು ಪುಂಡಾಟಿಕೆ ಮೆರೆದ ಏಳೆಂಟು ಯುವಕರು, ಬುಲೆಟ್ ಸೈಲೆನ್ಸರ್ನಲ್ಲಿ ಬೆಂಕಿಯ ಕಿಡಿ ಬರುವ ರೀತಿ ಅಪಾಯಕಾರಿ ರೈಡ್ ಮಾಡಿದ್ದರು. ಇದರಿಂದ ಇತರ ವಾಹನ ಸಂಚಾರಿಗಳಿಗೆ ಅಡ್ಡಿಪಡಿಸಿ, ಬೊಬ್ಬೆ ಹೊಡೆದು ಹೊಸ ವರ್ಷವನ್ನು ಸಂಭ್ರಮಿಸಿದ್ದರು. ಸಾರ್ವಜನಿಕರ ನೆಮ್ಮದಿ ಭಂಗ, ಸುಗಮ ಸಂಚಾರಕ್ಕೆ ಅಡ್ಡಿ ಮಾಡಿದ ಆರೋಪದಲ್ಲಿ ಇದೀಗ ಪೊಲೀಸರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಖತ್ ಕ್ಲಾಸ್ ತಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ