ಪುಂಡಾಟಿಕೆ ನಿಲ್ಲಿಸದಿದ್ದರೆ ಸೋಮವಾರದಿಂದ ಮಹಾರಾಷ್ಟ್ರದ ವಾಹನಗಳನ್ನು ಎಪಿಎಂಸಿ ಒಳಗೆ ಬಿಡಲ್ಲ; APMC ನೌಕರರ ಎಚ್ಚರಿಕೆ
ಪುಂಡಾಟಿಕೆ ಮುಂದುವರಿಸಿದರೆ ಮಹಾರಾಷ್ಟ್ರದ ವಾಹನಗಳಿಗೆ ನಿರ್ಬಂಧ ವಿಧಿಸಲಾಗುವುದು ಎಂದು ಯಶವಂತಪುರದಲ್ಲಿನ ಎಪಿಎಂಸಿ ನೌಕರರು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ಮಸಿ ಬಳಿದ ಮಹಾರಾಷ್ಟ್ರದ ಪುಂಡರಿಗೆ ಪ್ರತ್ಯುತ್ತರ ನೀಡಲು ಕರವೇ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಬೆಂಗಳೂರು: ಮಹಾರಾಷ್ಟ್ರದಲ್ಲಿ ಕರ್ನಾಟಕ ವಾಹನಗಳಿಗೆ ಕಪ್ಪು ಮಸಿ ಬಳಿದ ಹಿನ್ನೆಲೆ ಆಕ್ರೋಶಗೊಂಡ ನಗರದ APMC ಕಾರ್ಮಿಕ ಹಾಗೂ ಹಾಮಾಲಿ ಸಂಘಟನೆಗಳು ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು ಎಚ್ಚರಿಕೆ ನೀಡಿವೆ. ಎಪಿಎಂಸಿಗೆ ಬರುವ ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದ ಸಂಘಟನೆಯ ಕಾರ್ಯಕರ್ತರು, ಪುಂಡಾಟಿಕೆಯನ್ನು ಹೀಗೆ ಮುಂದುವರಿಸಿದರೆ ಮಹಾರಾಷ್ಟ್ರ ವಾಹನಗಳನ್ನ ಒಳಗೆ ಬರಲು ಬಿಡುವುದಿಲ್ಲ. ಸೋಮವಾರದವರೆಗೆ ನಿಮಗೆ ಕಾಲಾವಕಾಶ ನೀಡುತ್ತೇವೆ. ಬಾಲ ಬಿಚ್ಚಿದರೆ ನಿಮ್ಮ ವಾಹನಗಳನ್ನು ಒಳಗೆ ಬಿಡುವುದಿಲ್ಲ ಎಂದು ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಯಶವಂತಪುರದಲ್ಲಿ ಇರುವ ಎಪಿಎಂಸಿಗೆ ಪ್ರತಿದಿನ ಸುಮಾರು 400ಕ್ಕೂ ಹೆಚ್ಚು ಮಹಾರಾಷ್ಟ್ರ ವಾಹನಗಳು ಬರುತ್ತವೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ಗೆ ಜೈಲು: ಸುಬ್ರಮಣಿಯನ್ ಸ್ವಾಮಿ
ಮಹಾ ಪುಂಡರಿಗೆ ಪ್ರತ್ಯುತ್ತರ ನೀಡಲು ಸಜ್ಜಾದ ಕರವೇ
ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ KSRTC ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಮಹಾರಾಷ್ಟ್ರ ಬಸ್ಗಳಿಗೂ ಮಸಿ ಬಳಿಯಲು ಸಜ್ಜಾಗಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು: ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಕರೆ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Sat, 26 November 22