ಚಾಲಕನ ಅಜಾಗರೂಕತೆ, ಜಗಳೂರು ಬಳಿ ಟೋಲ್ ಬೂತ್ ಗೆ ಖಾಸಗಿ ಬಸ್ ಢಿಕ್ಕಿ, ಮೂವರಿಗೆ ಸಣ್ಣಪುಟ್ಟ ಗಾಯ

| Updated By: Digi Tech Desk

Updated on: Aug 29, 2022 | 2:08 PM

ದಾವಣಗೆರೆ ಜಿಲ್ಲೆ ಜಗಳೂರು (Jagalur) ತಾಲ್ಲೂಕಿನ ಕಾನನಕಟ್ಟೆ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿರುವ ಟೋಲ್ ಬೂತ್ ಗೆ (toll booth) ಖಾಸಗಿ ಬಸ್ಸೊಂದು ಸೋಮವಾರ ಬೆಳಗಿನ ಜಾವ ಢಿಕ್ಕಿ ಹೊಡೆದಿದೆ.

ದಾವಣಗೆರೆ: ಇದು ಬಸ್ ಚಾಲಕನ (driver) ನಿರ್ಲಕ್ಷ್ಯವಲ್ಲದೆ ಬೇರೇನೂ ಅಲ್ಲ. ವಿಡಿಯೋದಲ್ಲಿ ನಿಮಗದು ಸ್ಪಷ್ಟವಾಗಿ ಕಾಣುತ್ತದೆ. ದಾವಣಗೆರೆ ಜಿಲ್ಲೆ ಜಗಳೂರು (Jagalur) ತಾಲ್ಲೂಕಿನ ಕಾನನಕಟ್ಟೆ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿರುವ ಟೋಲ್ ಬೂತ್ ಗೆ (toll booth) ಖಾಸಗಿ ಬಸ್ಸೊಂದು ಸೋಮವಾರ ಬೆಳಗಿನ ಜಾವ ಢಿಕ್ಕಿ ಹೊಡೆದಿದೆ. ಬಸ್ನಲ್ಲಿದ್ದವರಲ್ಲಿ ಮೂವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಬೂತ್ ನಲ್ಲಿರುವ ಸಿಬ್ಬಂದಿಗೆ ಗಾಯಗಳಾಗಿಲ್ಲ.