ವಿಧಾನಸೌಧ ಮೊಗಸಾಲೆಯಲ್ಲಿ ಶಾಸಕರ ವಿಶ್ರಾಂತಿಗೆ ಬಂತು ರಿಕ್ಲೈನರ್ ಚೇರ್
ವಿಧಾನಸೌಧ ಮೊಗಸಾಲೆಯಲ್ಲಿ ಶಾಸಕರಿಗೆ ರಿಕ್ಲೈನರ್ ಚೇರ್ ವ್ಯವಸ್ಥೆ ಮಾಡಲಾಗಿದ್ದು, ಕಡಿಮೆ ಸಂಖ್ಯೆಯ ಚೇರ್ಗಳನ್ನು ಹಾಕಿದ್ದಕ್ಕೆ ಆಕ್ಷೇಪವೂ ವ್ಯಕ್ತವಾಗಿದೆ. ರಿಕ್ಲೈನರ್ ಚೇರ್ ಹಾಕುವ ಅಗತ್ಯ ಇರಲಿಲ್ಲ. ನಾವು ಇಲ್ಲಿ ರಿಲ್ಯಾಕ್ಸ್ ಮಾಡಲು ಬಂದಿಲ್ಲ, ಜನರ ಸಮಸ್ಯೆ ಆಲಿಸಲು ಬಂದಿದ್ದೇವೆ. ಈ ರೀತಿಯಾದ ಚೇರ್ ವ್ಯವಸ್ಥೆ ಅವಶ್ಯಕತೆ ಇಲ್ಲ. ನಾವು 224 ಶಾಸಕರಿದ್ದೇವೆ, ಐದಾರು ಚೇರ್ ಹಾಕಿದರೆ ಸಾಕಾ ಎಂದು ಶಾಸಕ ಎ ಮಂಜು ಪ್ರಶ್ನಿಸಿದ್ದಾರೆ.
ಬೆಂಗಳೂರು, ಮಾರ್ಚ್ 4: ವಿಧಾನಸಭೆ ಕಲಾಪದ ಊಟದ ವಿರಾಮದ ಬಳಿಕ ಶಾಸಕರು ವಿಶ್ರಾಂತಿಗಾಗಿ ಬೇರೆ ಕಡೆ ಹೋಗಿ ಕಲಾಪಕ್ಕೆ ಬರುವುದು ತಡವಾಗುವುದನ್ನು ತಪ್ಪಿಸುವುದಕ್ಕಾಗಿ ವಿಧಾನಸೌಧ ಮೊಗಸಾಲೆಯಲ್ಲಿ ರಿಕ್ಲೈನರ್ ಚೇರ್ ಅಳವಡಿಸುವುದಾಗಿ ಸ್ಪೀಕರ್ ಯುಟಿ ಖಾದರ್ ಈ ಹಿಂದೆ ಹೇಳಿದ್ದರು. ಇದೀಗ ಅದರಂತೆ ರಿಕ್ಲೈನರ್ ಚೇರ್ಗಳನ್ನು ಅಳವಡಿಸಲಾಗಿದೆ. ಆದರೆ, ಕೆಲವೇ ಕೆಲವು ರಿಕ್ಲೈನರ್ ಚೇರ್ ಅಳವಡಿಸಿದ್ದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.