Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: KKR ತಂಡದ 3 ಸ್ಟಾರ್ ಜೆರ್ಸಿ ಅನಾವರಣ

IPL 2025: KKR ತಂಡದ 3 ಸ್ಟಾರ್ ಜೆರ್ಸಿ ಅನಾವರಣ

ಝಾಹಿರ್ ಯೂಸುಫ್
|

Updated on:Mar 04, 2025 | 11:24 AM

IPL 2025 KKR: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಅನುಭವಿ ಆಟಗಾರ ಅಜಿಂಕ್ಯ ರಹಾನೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಸಿಎಸ್​ಕೆ ಪರ ಕಣಕ್ಕಿಳಿದಿದ್ದ ರಹಾನೆ ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಕೆಕೆಆರ್ ತಂಡದ ಉಪನಾಯಕನಾಗಿ ಯುವ ದಾಂಡಿಗ ವೆಂಕಟೇಶ್ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಕ್ಕಾಗಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಅದರ ಮೊದಲ ಹೆಜ್ಜೆಯಾಗಿ ಕೆಕೆಆರ್ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್​ನ ಟ್ರೇಡ್ ಮಾರ್ಕ್ ಬಣ್ಣವಾಗಿರುವ ಪರ್ಪಲ್​ ಕಲರ್​ನಲ್ಲೇ ಈ ಬಾರಿ ಕೂಡ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಈ ಜೆರ್ಸಿ ಮೇಲೆ ಸ್ಟಾರ್ ರೂಪದ ಡಿಸೈನ್ ನೀಡಲಾಗಿದೆ.

ಇನ್ನು ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ತ್ರಿ ಸ್ಟಾರ್ ಹೊಂದಿರುವ ಜೆರ್ಸಿಯಲ್ಲಿ ಕಣಕ್ಕಿಲಿಯಲಿದೆ. 2012, 2014 ಮತ್ತು 2024 ರ ಚಾಂಪಿಯನ್ ಪಟ್ಟವನ್ನು ಪ್ರತಿನಿಧಿಸುವ ಸ್ಟಾರ್​ಗಳನ್ನು ನೂತನ ಜೆರ್ಸಿ ಮೇಲೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿಯೇ ಇದನ್ನು ತ್ರಿ ಸ್ಟಾರ್ ಎಂದು ಕರೆಯಲಾಗುತ್ತಿದೆ.

ಹಾಗೆಯೇ ಈ ಜೆರ್ಸಿ ಅನವಾರಣದ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಈ ಬಾರಿ ಕೆಕೆಆರ್ ಪಡೆ ರಹಾನೆ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿದೆ. ಇನ್ನು ಉಪನಾಯಕನಾಗಿ ವೆಂಕಟೇಶ್ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ಹರ್ಷಿತ್ ರಾಣಾ, ರಮಣ್​​​ದೀಪ್ ಸಿಂಗ್, ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ರಹಮಾನುಲ್ಲಾ ಗುರ್ಬಾಝ್, ಅನ್ರಿಕ್ ನೋಕಿಯ, ಆಂಗ್‌ಕ್ರಿಶ್ ರಘುವಂಶಿ, ವೈಭವ್ ಅರೋರಾ, ಮಯಾಂಕ್ ಮಾರ್ಕಾಂಡೆ, ರೋವ್‌ಮನ್ ಪೊವೆಲ್, ಲವ್​​ನೀತ್ ಸಿಸೋಡಿಯಾ, ಅನ್ಕುಲ್ ರಾಯ್, ಮೊಯಿನ್ ಅಲಿ, ಉಮ್ರಾನ್ ಮಲಿಕ್, ಸ್ಪೆನ್ಸರ್ ಜಾನ್ಸನ್.

 

Published on: Mar 04, 2025 11:23 AM