ಸಿನಿಮಾರಂಗದವರು ನಾನಾಡಿದ ಮಾತುಗಳನ್ನು ಟೀಕಿಸಲಿ ಅಂತಲೇ ಹಾಗೆಲ್ಲ ಮಾತಾಡಿದ್ದು: ಡಿಕೆ ಶಿವಕುಮಾರ್
ರಾಜಕಾರಣಿಗಳು ಸಿನಿಮಾಗಳಿಲ್ಲದೆ ಬದುಕು ನಡೆಸಬಲ್ಲರು ಆದರೆ ಸಿನಿಮಾದವರಿಗೆ ಸರ್ಕಾರದ ನೆರವು ಅನಿವಾರ್ಯ, ಅವರಿಗೆ ಸರ್ಕಾರದ ಜೊತೆ ಜನಾನೂ ಬೇಕು ಎಂದು ಶಿವಕುಮಾರ್ ಹೇಳಿದರು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಶಿವಕುಮಾರ್ ಚಿತ್ರರಂಗದವರ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದ ಸೃಷ್ಟಿಸಿವೆ, ಸಿನಿಮಾದವರು ಪರ ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬೆಂಗಳೂರು, ಮಾರ್ಚ್ 4: ಸದನದ ಇವತ್ತಿನ ಕಲಾಪದಲ್ಲಿ ಭಾಗವಹಿಸುವ ಮೊದಲು ವಿಧಾನಸಭೆಯ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿನಿಮಾ ರಂಗದವರು ಟೀಕೆ ಮಾಡಲಿ ಅಂತಾನೇ ತಾನು ನಟ್ಟು ಬೋಲ್ಟು (nuts and bolts) ಅಂತ ಪದ ಬಳಕೆ ಮಾಡಿದ್ದು ಎಂದು ಹೇಳಿದರು. ಚಿತ್ರರಂಗಕ್ಕೆ ಒಳ್ಳೆಯದಾಗಲಿ ಅಂತ ಸರ್ಕಾರ ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಿದ್ದು, ಅವರೇ ಅದರಲ್ಲಿ ಭಾಗವಹಿಸದಿದ್ದರೆ ಹೇಗೆ ಎಂದು ಶಿವಕುಮಾರ್ ಕೇಳಿದರು. ಸಿನಿಮಾದವರಿಗೆ ತಾನು ಸಾಕಷ್ಟು ಸಹಾಯ ಮಾಡಿದ್ದೇನೆ, ಸಹಾಯ ಪಡೆದವರಿಗೆ ಅದು ಚೆನ್ನಾಗಿ ಗೊತ್ತಿದೆ, ಆಯೋಜನೆಯಲ್ಲಿ ಒಂದಷ್ಟು ತಪ್ಪುಗಳಾಗಿರಬಹುದು, ನಿರ್ದೇಶಕ ನಾಗಾಭರಣ ಹೇಳಿರುವುದನ್ನು ಅಪಾರ್ಥ ಭಾವಿಸಲ್ಲ ಎಂದು ಶಿವಕುಮಾರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೀರಪ್ಪ ಮೊಯ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಪ್ರತಿಕ್ರಿಸುವುದು ನನಗಿಷ್ಟವಿಲ್ಲ: ಡಿಕೆ ಶಿವಕುಮಾರ್