ಸಚಿವ ಡಿ ಸುಧಾಕರ್ ಆಪ್ತನಿಂದ ಪೊಲೀಸರಿಗೆ ಆವಾಜ್, ಸಚಿವನಿಂದ ಗೂಂಡಾಪಡೆ ಪೋಷಣೆ?
ಅಸಲಿಗೆ ಸರ್ಕಾರ ಇಂಥ ಗೂಂಡಾಗಳ ನಟ್ಟು ಬೋಲ್ಟುಗಳನ್ನು ಸರ್ಕಾರ ಟೈಟ್ ಮಾಡಬೇಕಿದೆ. ಭರತ್ ರೆಡ್ಡಿ ಸಚಿವ ಡಿ ಸುಧಾಕರ್ ಆಪ್ತನಾಗಿರುವ ಕಾರಣಕ್ಕೆ ಅವನ ವಿರುದ್ಧ ದೂರು ಕೂಡ ದಾಖಲಾಗಲ್ಲ. ಏನ್ಸಾರ್ ಹೀಗೆ ಅಂತ ಗೃಹ ಸಚಿವನನ್ನು ಕೇಳಿದರೆ, ನನ್ನ ಗಮನಕ್ಕೆ ಬಂದಿಲ್ಲ, ಅಂಥದೇನಾದರೂ ಇದ್ದರೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ ಎಂಬ ಉತ್ತರ ಮಾಧ್ಯಮದವರಿಗೆ ಸಿಗುತ್ತದೆ.
ಚಿತ್ರದುರ್ಗ, ಮಾರ್ಚ್ 4: ಇವನ್ಯಾವನೋ ಭರತ್ ರೆಡ್ಡಿ ಅಂತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ (D Sudhakar) ಆಪ್ತನಂತೆ. ಸಚಿವ ತಮ್ಮ ಕ್ಷೇತ್ರದಲ್ಲಿ ಗೂಂಡಾಪಡೆಯನ್ನು ಪೋಷಿಸುತ್ತಿದ್ದಾರೆಯೇ ಅಂತ ಇವನನ್ನು ನೋಡಿದರೆ ಅನುಮಾನ ಹುಟ್ಟುತ್ತೆ. ಮಾರ್ಚ್ 2 ರಂದು ದುರ್ಗದ ಜಯದೇವ ಕ್ರೀಡಾಂಗಣ ಬಳಿ ನಡೆದಿರುವ ಘಟನೆ ಇದು. ರಾತ್ರಿ ಸಮಯದಲ್ಲಿ ಗುಂಪಾಗಿ ನಿಂತಿದ್ದೇಕೆ ಎಂದು ಕರ್ತವ್ಯನಿರತ ಪೊಲೀಸರು ಕೇಳಿದ್ದಕ್ಕೆ ಭರತ್ ರೆಡ್ಡಿ ಎನ್ನುವವನು ಹೊಯ್ಸಳ ವಾಹನದ ಕಸಿದು ರೋಪ್ ಹಾಕುತ್ತಿದ್ದಾನೆ. ಪೊಲೀಸರು ಸಭ್ಯವಾಗಿ ಕೀ ಕೊಡಿ ಅಂತ ಕೇಳಿದರೆ ಕೊಡಲ್ಲ ಏನ್ ಮಾಡ್ತೀಯಾ ಮಾಡ್ಕೋ ಯಾರಿಗೆ ಬೇಕಾದರೂ ಫೋನ್ ಮಾಡು ಅಂತಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿತ್ರದುರ್ಗ ಮುರುಘಾ ಮಠದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ, ಏನದು?
Latest Videos

ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್

ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ

VIDEO: ಆಂಬ್ಯುಲೆನ್ಸ್ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
