Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Session; ಗ್ರಾಮೀಣ ಭಾಗದ ಕಿರಾಣಾ ಅಂಗಡಿಗಳಲ್ಲೂ ಅವ್ಯಾಹತವಾಗಿ ಮದ್ಯ ಮಾರಾಟ ನಡೆದಿದೆ: ಅರಗ ಜ್ಞಾನೇಂದ್ರ

Karnataka Budget Session; ಗ್ರಾಮೀಣ ಭಾಗದ ಕಿರಾಣಾ ಅಂಗಡಿಗಳಲ್ಲೂ ಅವ್ಯಾಹತವಾಗಿ ಮದ್ಯ ಮಾರಾಟ ನಡೆದಿದೆ: ಅರಗ ಜ್ಞಾನೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 04, 2025 | 12:43 PM

ಸರ್ಕಾರದ ಪರವಾಗಿ ಉತ್ತರ ನೀಡಿದ ಡಿಕೆ ಶಿವಕುಮಾರ್, ಅರಗ ಜ್ಞಾನೇಂದ್ರ ಮದ್ಯ ಮಾರಾಟ ಸಂಗತಿಯನ್ನು ಪ್ರಸ್ತಾವನೆ ಮಾಡಿದ್ದಾರೆ, ಹಿಂದೆ ಅವರು ಗೃಹ ಸಚಿವರಾಗಿದ್ದಾಗ ಎಷ್ಟು ಕಿರಾಣಾ ಅಂಗಡಿಗಳನ್ನು ಮುಚ್ಚಿಸಿದ್ದರೆಂದು ಹೇಳಲಿ, ನಾವು ಮುಚ್ಚಿಸೋಣ ಅನ್ನುತ್ತಾರೆ. ಎಲ್ಲ ಶಾಸಕರಿಂದ ಪಟ್ಟಿ ಪಡೆದು ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವುದನ್ನು ನಿಲ್ಲಿಸಿ ಎಂದು ಸಭಾಧ್ಯಾಕ್ಷರು ಶಿವಕುಮಾರ್​​ಗೆ ಹೇಳುತ್ತಾರೆ.

ಬೆಂಗಳೂರು ಮಾರ್ಚ್ 4: ವಿಧಾನ ಸಭೆಯಲ್ಲಿ ಇಂದಿನ ಕಲಾಪ ಶುರುವಾದ ಬಳಿಕ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ (Araga Jnanendra) ಮದ್ಯಮಾರಾಟದ ಹಾವಳಿಯನ್ನು ಪ್ರಸ್ತಾಪಿಸಿ ಗ್ರಾಮೀಣಭಾಗದಲ್ಲಿ ಕಿರಣಾ ಅಂಗಡಿಗಳಲ್ಲೂ ಮದ್ಯವನ್ನು ಅವ್ಯಾಹತವಾಗಿ ಮಾರಲಾಗುತ್ತಿದೆ, ಅಬಕಾರಿ ಮತ್ತು ಪೊಲೀಸ್ ಇಲಾಖೆಯವರಿಗೆ ಮಾಮೂಲಿ ನೀಡಿದರೆ ಅವರು ಸುಮ್ಮನಿರುತ್ತಾರೆ ಎಂದು ಹೇಳಿ, ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳು ವಾಸವಾಗಿರುವ ಪ್ರದೇಶಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದರು. ಅವರ ಎಸ್ ಸಿ, ಎಸ್ಟಿ ಸಮುದಾಯ ಮಾತಿನಿಂದ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕರೊಬ್ಬರು ಎದ್ದುನಿಂತು, ಕೇವಲ ಆ ಸಮುದಾಯದವರು ಮಾತ್ರ ಕುಡಿಯುತ್ತಾರಾ? ಬೇರೆಯವರು ಕುಡಿಯಲ್ವಾ? ನೀವು ಕುಡಿಯಲ್ವಾ ಅಂತ ತರಾಟೆಗೆ ತೆಗದುಕೊಂಡರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget Session; ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವ ಪ್ರಸ್ತಾವನೆ ಮುಖ್ಯಮಂತ್ರಿಗೆ ನೀಡಿದ್ದೇವೆ: ಲಕ್ಷ್ಮಿ ಹೆಬ್ಬಾಳ್ಕರ್