ರೆಡ್ಮಿ ಫೋನ್ ಆರಾಧಕರಿಗೆ ಸಿಹಿಸುದ್ದಿ, ರೆಡ್ಮಿ ನೋಟ್ 11ಟಿ 5ಜಿ ಫೋನ್ ನವೆಂಬರ್ 30 ರಂದು ಭಾರತದಲ್ಲಿ ಲಾಂಚ್ ಅಗಲಿದೆ
ರೆಡ್ಮಿ ಅಧಿಕೃವಾಗಿ ಇದರ ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲ. ಲಾಂಚ್ ಮಾಡುವ ಸಮಯದಲ್ಲೇ ಇದರ ಬೆಲೆ ಬಹಿರಂಗಪಡಿಸಲಾಗುವುದು ಎಂದು ಮಾಹಿತಿ ಸಿಕ್ಕಿದೆ.
ರೆಡ್ಮಿ ನೋಟ್ 11ಟಿ 5ಜಿ ಫೋನನ್ನು ಭಾರತದಲ್ಲಿ ನವೆಂಬರ್ 30 ರಂದು ಲಾಂಚ್ ಮಾಡಲಿರುವ ವಿಷಯವನ್ನು ರೆಡ್ಮಿ ಸಂಸ್ಥೆ ಖಚಿತಪಡಿಸಿದೆ. ಹೊಸ ಪೋನಿನ ಎಲ್ಲ ಫೀಚರ್ ಗಳನ್ನು ಗಮನಿಸಲು ರೆಡ್ಮಿ ಒಂದು ಲ್ಯಾಂಡಿಂಗ್ ಪೇಜನ್ನು ಸೃಷ್ಟಿಸಿದೆ. ಅದರ ಮೂಲಕ ಲಭ್ಯವಿರುವ ಮಾಹಿತಿಯ ಪ್ರಕಾರ ಹೊಸ ಸ್ಮಾರ್ಟ್ ಫೋನ್ ಸಿಲ್ವರ್ ಮತ್ತು ಹಸಿರು ಬಣ್ಣಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಇದಲ್ಲದೆ ರೆಡ್ಮಿ ನೋಟ್ 11 ಟಿ ಕ್ಷಿಪ್ರ ಗತಿಯಲ್ಲಿ ಚಾರ್ಜ್ ಅಗುವ ಮತ್ತು ಱಮ್ ಬೂಸ್ಟ್ ಫೀಚರ್ ಹೊಂದಿದೆ.
ರೆಡ್ಮಿ ನೋಟ್ 11ಟಿ 5ಜಿ ಕಳೆದ ತಿಂಗಳು ಚೀನಾನಲ್ಲಿ ಲಾಂಚ್ ಆದ ಮರುಬ್ಯಾಡ್ಜ್ ಮಾಡಿದ ರೆಡ್ಮಿ ನೋಟ್ 11 ಆಗಿರಬಹುದು ಎಂದು ಊಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದ್ದೇಯಾದರೆ, ರೆಡ್ಮಿ ನೋಟ್ 11ಟಿ 5ಜಿ ಸ್ಮಾರ್ಟ್ಫೋನ್ 90 ಎಚ್ಜೆಡ್ ರಿಫ್ರೆಶ್ ರೇಟ್ನೊಂದಿಗೆ 6.6-ಇಂಚಿನ ಐ ಪಿ ಎಸ್ ಎಲ್ ಸಿ ಡಿ ಪ್ಯಾನೆಲ್ ಅನ್ನು ಹೊಂದಿರಬಹುದು. ಇದು ಅಕ್ಟಾ-ಕೋರ್ ಡೈಮೆನ್ಸಿಟಿ 810 ಚಿಪ್‌ಸೆಟ್‌ನಿಂದ ಚಾಲಿತವಾಗಬಹುದು ಅಂತಲೂ ನಿರೀಕ್ಷಿಸಲಾಗುತ್ತಿದೆ.
ರೆಡ್ಮಿ ನೋಟ್ 11ಟಿ 5ಜಿ ಫೋನಲ್ಲಿ 8 ಜಿಬಿ ಱಮ್ ಮತ್ತು 256ಜಿಬಿ ಸ್ಟೋರೇಜ್ ಪಡೆಯಬಹುದು. ಈ ಫೋನ್‌ನಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 16-ಮೆಗಾಪಿಕ್ಸೆಲ್ ಶೂಟರ್ ಅನ್ನು ಅಳವಡಿಸಿರಬಹುದಾಗಿದೆ. ರೆಡ್ಮಿ ಈ ಸಾಧನವನ್ನು 5000 ಎಮ್ ಎ ಎಚ್ ಬ್ಯಾಟರಿಯೊಂದಿಗೆ 33 ಡಬ್ಲ್ಯು ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಬಹುದು.
ಅಂದಹಾಗೆ, ರೆಡ್ಮಿ ನೋಟ್ 11ಟಿ 5ಜಿ ಫೋನಿನ ಬೆಲೆ ತಿಳಿದುಕೊಳ್ಳವುದು ಅಗತ್ಯವಾಗಿದೆ. ಆದರೆ, ಸಮಸ್ಯೆಯೇನೆಂದರೆ, ರೆಡ್ಮಿ ಅಧಿಕೃವಾಗಿ ಇದರ ಬೆಲೆಯನ್ನು ಇನ್ನೂ ಪ್ರಕಟಿಸಿಲ್ಲ. ಲಾಂಚ್ ಮಾಡುವ ಸಮಯದಲ್ಲೇ ಇದರ ಬೆಲೆ ಬಹಿರಂಗಪಡಿಸಲಾಗುವುದು ಎಂದು ಮಾಹಿತಿ ಸಿಕ್ಕಿದೆ. ನಂಬಲರ್ಹ ಮೂಲಗಳ ಪ್ರಕಾರ 6ಜಿಬಿ ಱಮ್ ಮತ್ತು 64ಜಿಬಿ ಸ್ಟೋರೇಜ್ ಮಾಡೆಲ್ ರೆಡ್ಮಿ ನೋಟ್ 11ಟಿ 5ಜಿ ಸ್ಲಾರ್ಟ್ ಫೋನಿನ ಆರಂಭಿಕ ಬೆಲೆ ರೂ 16,999 ಆಗಿರಲಿದೆ.
ಇದನ್ನೂ ಓದಿ: ಹೆಚ್.ಡಿ. ಕೋಟೆ: ಕೆರೆ ಕೋಡಿಯಲ್ಲಿ ಮೀನು ಹಿಡಿಯಲು ಮುಗಿಬಿದ್ದ ಯುವಕರು; ವಿಡಿಯೋ ನೋಡಿ