ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ರಾಜಕೀಯೇತರ ಬಾಂಧವ್ಯ ಇದೆ: ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

|

Updated on: Aug 29, 2023 | 12:37 PM

ವಿಧಾನ ಸಭೆ ಆಧಿವೇಶನ ನಡೆಯುತ್ತಿದ್ದಾಗ ಗಲಾಟೆ ನಡೆದು ತಮ್ಮ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಲಿಗೆ ಬಂದು ಅರೋಗ್ಯ ವಿಚಾರಿಸಿಕೊಂಡು ಹೋಗಿದ್ದನ್ನು ನೆನಪಿಸಿಕೊಂಡರು. ಅದಲ್ಲದೆ ತಮ್ಮ ನಡುವೆ ರಾಜಕೀಯೇತರ ಸಂಗತಿಗಳು ಚರ್ಚೆಯಾಗುವ ಬಗ್ಗೆಯೂ ಯತ್ನಾಳ್ ಮೆಲಕು ಹಾಕಿದರು.

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಪರಸ್ಪರ ಎಷ್ಟಾದರೂ ಟೀಕಿಸಿಕೊಳ್ಳಲಿ, ಅವರ ನಡುವೆ ಸ್ನೇಹ-ಪ್ರೀತಿ-ಬಾಂಧವ್ಯ ಇದೆ. ಇದು ಹಲವಾರು ಬಾರಿ ಪ್ರೂವ್ ಆಗಿರುವ ಅಂಶ. ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಇಂದು ಸಾರ್ವಜನಿಕ ಸಭೆಯೊಂದರಲ್ಲಿ ಮಾತಾಡಿದ ಯತ್ನಾಳ್, ಮುಖ್ಯಮಂತ್ರಿ ಮತ್ತು ಶಾಸಕರ ನಡುವಿನ ಸಂಬಂಧಗಳ ಬಗ್ಗೆ ಮಾತಾಡುತ್ತಾ, ವಿಧಾನ ಸಭೆ ಆಧಿವೇಶನ (Assembly Session) ನಡೆಯುತ್ತಿದ್ದಾಗ ಗಲಾಟೆ ನಡೆದು ತಮ್ಮ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾದಾಗ ಸಿದ್ದರಾಮಯ್ಯನವರು (Siddaramaiah) ಅಲ್ಲಿಗೆ ಬಂದು ಅರೋಗ್ಯ ವಿಚಾರಿಸಿಕೊಂಡು ಹೋಗಿದ್ದನ್ನು ನೆನಪಿಸಿಕೊಂಡರು. ಅದಲ್ಲದೆ ತಮ್ಮ ನಡುವೆ ರಾಜಕೀಯೇತರ ಸಂಗತಿಗಳು ಚರ್ಚೆಯಾಗುವ ಬಗ್ಗೆಯೂ ಯತ್ನಾಳ್ ಮೆಲಕು ಹಾಕಿದರು. ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ ಅವರು ಮಾತಾಡುವುದನ್ನು ಕಡಿಮೆ ಮಾಡಿರೋದು, ಹೆಚ್ಚು ಶಾಂಚಿತ್ತರಾಗಿರುವುದರ ಬಗ್ಗೆ ಕೇಳಿದಾಗ ಸಿದ್ದರಾಮಯ್ಯ ಏನು ಮಾಡೋದು ಯತ್ನಾಳ್ ಇದು ಕೊನೆಯ ಅವಧಿ ಎಂದಿದ್ದರಂತೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ