ಸೂರ್ಯನ ವಿವಿಧ ಕಿರಣಗಳು ಉಪಗ್ರಹಗಳ ಮೇಲೆ ಬೀರುವ ಪರಿಣಾಮವನ್ನು ಆದಿತ್ಯ ಎಲ್-1 ಅಧ್ಯಯನ ಮಾಡುತ್ತದೆ: ಬಿಎನ್ ರಾಮಕೃಷ್ಣ, ಇಸ್ರೋ ವಿಜ್ಞಾನಿ

ಸೂರ್ಯನ ವಿವಿಧ ಕಿರಣಗಳು ಉಪಗ್ರಹಗಳ ಮೇಲೆ ಬೀರುವ ಪರಿಣಾಮವನ್ನು ಆದಿತ್ಯ ಎಲ್-1 ಅಧ್ಯಯನ ಮಾಡುತ್ತದೆ: ಬಿಎನ್ ರಾಮಕೃಷ್ಣ, ಇಸ್ರೋ ವಿಜ್ಞಾನಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 29, 2023 | 11:00 AM

ಸೂರ್ಯನಿಂದ ಹೊರಬೀಳುವ ಬಗೆಬಗೆಯ ಕಿರಣಗಳು ಮತ್ತು ಆಯಸ್ಕಾಂತೀಯ ಬಿರುಗಾಳಿಯಿಂದ ಭಾರತ ಈಗಾಗಲೇ ಆಕಾಶಕ್ಕೆ ಹಾರಿಸಿರುವ ಉಪಗ್ರಹಗಳ ಮೇಲೆ ಯಾವ ಪರಿಣಾಮ ಬೀರುತ್ತದೆ, ಮತ್ತು ಸೂರ್ಯನ ಮೇಲ್ಮೈನಲ್ಲಿ ಸಂಭವಿಸುವ ಕೊರೊನಲ್ ಮಾಸ್ ರಿಜೆಕ್ಷನ್ (ಜ್ವಾಲಾಮುಖಿಗಳ ಸೃಷ್ಟಿ) ಯಾಕೆ ನಡೆಯುತ್ತದೆ ಮತ್ತು ಅದು ಪೃಥ್ವಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಮೊದಲಾದ ಸಂಗತಿಗಳನ್ನು ಆದಿತ್ಯ ಎಲ್-1 ಅಧ್ಯಯನ ನಡೆಸಲಿದೆ ಎಂದು ರಾಮಕೃಷ್ಣ ಹೇಳುತ್ತಾರೆ.

ಬೆಂಗಳೂರು: ಭಾರತದ ವಿಜ್ಞಾನಿಗಳು ಯಾರಿಗೂ ಕಮ್ಮಿಯಿಲ್ಲ ಅಂತ ಹಲವು ಸಲ ಸಾಬೀತಾಗಿದೆ ಅದಕ್ಕೆ ಇತ್ತೀಚಿನ ಸಾಕ್ಷಿಯೆಂದರೆ ಚಂದ್ರಯಾನ-3 (Chandrayaan-3) ಮಿಶನ್ ಪ್ರಚಂಡ ಯಶಸ್ಸು. ಈ ಸಫಲ ಮತ್ತು ಎಲ್ಲ ಭಾರತೀಯರನ್ನು ಗರ್ವದಿಂದ ಬೀಗುವಂತೆ ಮಾಡಿದ ಅಭಿಯಾನದ ಬಳಿಕ ಇಸ್ರೋ ವಿಜ್ಞಾನಿಗಳ ಮುಂದಿನ ಯೋಜನೆ ಏನು, ಯಾವ ಸಾಹಸಕ್ಕೆ ಅವರು ಕೈಹಾಕಲಿದ್ದಾರೆ ಅಂತ ಕೇವಲ ನಮಗಷ್ಟೇ ಅಲ್ಲ ವಿಶ್ವದ ನಾನಾ ದೇಶಗಳ ವಿಜ್ಞಾನಿಗಳಲ್ಲೂ ಕುತೂಹಲ ಮೂಡಿದೆ. ಅದರ ಬಗ್ಗೆ ಮಾಹಿತಿ ಸಂಗ್ರಹಿಸಲು ಟಿವಿ ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ISRO Telemetry Tracking and Command Network) ಕೇಂದ್ರದ ನಿರ್ದೇಶಕ ಬಿ ಎನ್ ರಾಮಕೃಷ್ಣ (B N Ramakrishna, Director, ISTRAC) ಅವರೊಂದಿಗೆ ಮಾತಾಡಿದ್ದಾರೆ. ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ವಿಜ್ಞಾನಿಗಳು ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಇಸ್ರೋ ವಿಜ್ಞಾನಿಗಳು ಸಿದ್ಧಪಡಿಸಿದ್ದು ಅದು ಸೂರ್ಯನಿಂದ ಹೊರಬೀಳುವ ಬಗೆಬಗೆಯ ಕಿರಣಗಳು ಮತ್ತು ಆಯಸ್ಕಾಂತೀಯ ಬಿರುಗಾಳಿಯಿಂದ ಭಾರತ ಈಗಾಗಲೇ ಆಕಾಶಕ್ಕೆ ಹಾರಿಸಿರುವ ಉಪಗ್ರಹಗಳ ಮೇಲೆ ಯಾವ ಪರಿಣಾಮ ಬೀರುತ್ತದೆ, ಮತ್ತು ಸೂರ್ಯನ ಮೇಲ್ಮೈನಲ್ಲಿ ಸಂಭವಿಸುವ ಕೊರೊನಲ್ ಮಾಸ್ ರಿಜೆಕ್ಷನ್ (ಜ್ವಾಲಾಮುಖಿಗಳ ಸೃಷ್ಟಿ) ಯಾಕೆ ನಡೆಯುತ್ತದೆ ಮತ್ತು ಅದು ಪೃಥ್ವಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಮೊದಲಾದ ಸಂಗತಿಗಳನ್ನು ಆದಿತ್ಯ ಎಲ್-1 ಅಧ್ಯಯನ ನಡೆಸಲಿದೆ ಎಂದು ರಾಮಕೃಷ್ಣ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ