ಮಹಾಕುಂಭ; ತ್ರಿವೇಣಿ ಸಂಗಮದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ

Updated on: Feb 11, 2025 | 10:21 PM

ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂತಾದ ಪ್ರಮುಖರು ಸಹ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ.

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಇಂದು ತಮ್ಮ ಕುಟುಂಬಸ್ಥರೊಂದಿಗೆ ಭಾಗವಹಿಸಿದ್ದಾರೆ. ಮುಖೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಅರೈಲ್ ಘಾಟ್‌ನಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ವೇಳೆ ಅವರ ತಾಯಿ ಕೋಕಿಲಾಬೆನ್ ಅಂಬಾನಿ, ಪುತ್ರರಾದ ಅನಂತ್ ಮತ್ತು ಆಕಾಶ್ ಅಂಬಾನಿ, ಆಕಾಶ್ ಅವರ ಪತ್ನಿ ಶ್ಲೋಕಾ ಮೆಹ್ತಾ ಮತ್ತು ಅವರ ಮಕ್ಕಳಾದ ಪೃಥ್ವಿ ಮತ್ತು ವೇದಾ ಕೂಡ ಪವಿತ್ರ ಸ್ನಾನ ಮಾಡಿದ್ದಾರೆ. ಅಂಬಾನಿ ಅವರ ಕುಟುಂಬವನ್ನು ಘಾಟ್‌ನಲ್ಲಿ ದೋಣಿಗಳ ಕಡೆಗೆ ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಯಿತು.

ಶಾಂತತೆಗೆ ಹೆಸರುವಾಸಿಯಾದ ಅರೈಲ್ ಘಾಟ್, ನೈನಿ ಸೇತುವೆ ಮತ್ತು ಹತ್ತಿರದ ಹಲವಾರು ದೇವಾಲಯಗಳ ನಡುವಿನ ಆಧ್ಯಾತ್ಮಿಕ ಏಕಾಂತ ಸ್ಥಳವಾಗಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿರುವ ಈ ಸ್ಥಳವು ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಇದೀಗ ಅಂಬಾನಿ 4 ತಲೆಮಾರಿನವರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 11, 2025 10:20 PM