ಆರೋಪ ಮಾಡುವ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ

Edited By:

Updated on: Jul 03, 2024 | 7:22 PM

ಪವಿತ್ರಾ ಗೌಡ ಮಾತ್ರವಲ್ಲದೇ ಅನೇಕ ನಟಿಯರಿಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಆರೋಪ ಎದುರಾಗಿದೆ. ಈ ಕುರಿತು ಕೆಲವು ನಟಿಯರು ಈಗ ಬಾಯಿಬಿಟ್ಟಿದ್ದಾರೆ. ಅಂತಹ ಆರೋಪಗಳಿಗೆ ರೇಣುಕಾ ಸ್ವಾಮಿ ಅವರ ತಂದೆ ಕಾಶೀನಾಥಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ನಟಿಯರೆಲ್ಲ ಇಷ್ಟು ದಿನ ಯಾಕೆ ಸುಮ್ಮನಿದ್ದರು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ನಟ ದರ್ಶನ್​, ನಟಿ ಪವಿತ್ರಾ ಗೌಡ ಹಾಗೂ ಅವರ ಸಹಚರರು ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಘಟನೆಯ ಹಿಂದೆ ಇರುವುದು ಒಂದು ಅಶ್ಲೀಲ ಮೆಸೇಜ್​ ಎನ್ನಲಾಗಿದೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದರಿಂದಲೇ ಇಷ್ಟೆಲ್ಲ ಆಗಿದೆ ಎಂಬುದು ಸದ್ಯದ ಮಾಹಿತಿ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ರೇಣುಕಾ ಸ್ವಾಮಿಯ ನಕಲಿ ಸೋಶಿಯಲ್​ ಮೀಡಿಯಾ ಖಾತೆಯಿಂದ ನಮಗೂ ಕೆಟ್ಟ ಮೆಸೇಜ್​ ಬಂದಿತ್ತು ಎಂದು ಕೆಲವು ನಟಿಯರು ಈಗ ಬಾಯಿಬಿಟ್ಟಿದ್ದಾರೆ. ಆ ಕುರಿತು ರೇಣುಕಾ ಸ್ವಾಮಿ ತಂದೆ ಕಾಶೀನಾಥಯ್ಯ ಮಾತನಾಡಿದ್ದಾರೆ. ‘ಅಂಥವರ ಆರೋಪಕ್ಕೆ ಈಗ ಏನು ಹೇಳೋದು? ಒಂದು ವೇಳೆ ಆ ರೀತಿ ಇದ್ದಿದ್ದರೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಬಹುದಿತ್ತು. ಈಗ ಏನೇನೋ ಹೇಳಿದರೆ ನಾವು ಅದರ ಬಗ್ಗೆ ಮಾತನಾಡಲು ತಯಾರಿಲ್ಲ. ಈಗ ಯಾಕೆ ಆರೋಪ ಮಾಡುತ್ತಿದ್ದಾರೆ ಎಂಬುದು ಅವರಿಗೇ ಗೊತ್ತು. ಬೇಕಿದ್ದರೆ ಈಗಲೂ ದೂರು ನೀಡಲಿ. ಪೊಲೀಸರು, ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ’ ಎಂದು ಕಾಶೀನಾಥಯ್ಯ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us