‘ಬೇರೇ ಜೈಲಿಗೆ ಶಿಫ್ಟ್ ಮಾಡಿ ಪ್ಲೀಸ್’; ಬಳ್ಳಾರಿ ಜೈಲಲ್ಲಿ ಸುಸ್ತಾದ ದರ್ಶನ್

|

Updated on: Sep 13, 2024 | 11:02 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿದ ಪೊಲೀಸರು ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ 3991 ಪುಟಗಳ ವಿವರವಾದ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ಮಧ್ಯೆ ದರ್ಶನ್ ಅವರು ಜೈಲು ಬದಲಿಸುವಂತೆ ಕೋರಿಕೆ ಇಟ್ಟಿದ್ದಾರೆ.

ನಟ ದರ್ಶನ್ ಅವರು ಹೊಸ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನ ಜೈಲಿನಲ್ಲಿ ಹಾಯಾಗಿದ್ದ ಅವರು ಈಗ ಬಳ್ಳಾರಿಗೆ ಜೈಲಿಗೆ ಬಂದಿದ್ದಾರೆ. ಇಲ್ಲಿ ಅವರು ಹೊಸ ಬೇಡಿಕೆ ಇಟ್ಟಿದ್ದಾರೆ. ‘ಬೇರೆ ಜೈಲಿಗೆ ನನ್ನ ಶಿಫ್ಟ್ ಮಾಡಿ. ಈ ಜೈಲು ಸೆಟ್ ಆಗುತ್ತಿಲ್ಲ’ ಎಂದು ದರ್ಶನ್ ಹೇಳಿದ್ದಾರಂತೆ. ಈ ರೀತಿಯ ಮನವಿಯನ್ನು ಅವರು ಕೋರ್ಟ್ ಎದುರು ಮಾಡಬೇಕಿದೆ. ಈ ಮನವಿ ಪುರಸ್ಕಾರ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.