Republic Day 2024 Live: ದೆಹಲಿ; ಗಣರಾಜ್ಯೋತ್ಸವ ಸಂಭ್ರಮಾಚರಣೆಯ ನೇರಪ್ರಸಾರ ಇಲ್ಲಿದೆ ನೋಡಿ
75th Republic Day Live Updates: ದೇಶಾದ್ಯಂತ ಇಂದು (ಜ.26) 75ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಎಲ್ಲಡೆ ಸಂಭ್ರಮ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಕರ್ತವ್ಯಪಥದಲ್ಲಿ ಪರೇಡ್ ಮತ್ತು ಸ್ಥಬ್ಧಚಿತ್ರ ಪ್ರದರ್ಶನ ನಡೆಯಲಿದೆ. ಇದ
ದೇಶಾದ್ಯಂತ ಇಂದು (ಜ.26) 75ನೇ ಗಣರಾಜ್ಯೋತ್ಸವ (Republic day) ಆಚರಿಸಲಾಗುತ್ತದೆ. ಎಲ್ಲಡೆ ಸಂಭ್ರಮ ಮನೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಕರ್ತವ್ಯಪಥದಲ್ಲಿ ಪರೇಡ್ ಮತ್ತು ಸ್ಥಬ್ಧಚಿತ್ರ ಪ್ರದರ್ಶನ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ವಂದನೆ ಸ್ವೀಕರಿಸಲಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವದ ಥೀಮ್ ಅಭಿವೃದ್ಧಿ ಹೊಂದಿದ ಭಾರತ ಮತ್ತು ಭಾರತ ಪ್ರಜಾಪ್ರಭುತ್ವದ ತಾಯಿ. ದೇಶದ ಮಹಿಳಾ ಶಕ್ತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕೇಂದ್ರೀಕರಿಸುವುದು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಪಥದಲ್ಲಿ ಇಂದು ದೇಶದ ನಾರಿಶಕ್ತಿ ಅನಾವರಣಗೊಳ್ಳಲಿದೆ. ಇಂದಿನ ಗಣರಾಜ್ಯೋತ್ಸವದ ಪರೇಡ್ ಲೈವ್ ಆಗಿ ಟಿವಿ9 ಡಿಜಿಟಲ್ನಲ್ಲಿ ನೋಡಿ..
Published on: Jan 26, 2024 10:12 AM
Latest Videos