ಕಿರಿ ವಯಸ್ಸಿನವರು ಹೃದಯಾಘಾತಕ್ಕೆ ಈಡಾಗುತ್ತಿರುವ ಆಯಾಮದ ಮೇಲೆ ಬೆಂಗಳೂರಿನಲ್ಲಿ ಸಂಶೋಧನೆ ನಡೆಯುತ್ತಿದೆ: ಡಾ ರಾಹುಲ ಪಾಟೀಲ
ಡಾ ಪಾಟೀಲ ಹೇಳುವ ಹಾಗೆ, ಕಳೆದ 5 ವರ್ಷಗಳಲ್ಲಿ 40ಕ್ಕಿಂತ ಕಡಿಮೆ ವಯಸ್ಸಿನವರು ಹೃದ್ರೋಗದಿಂದ ಬಳಲುತ್ತಿರುವ ಪ್ರಮಾಣ ಶೇಕಡಾ 22 ರಷ್ಟು ಹೆಚ್ಚಾಗಿದೆಯಂತೆ. ದಿನಕ್ಕೆ ಕನಿಷ್ಟ 2-3 ಜನ ಅವರಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ.
ಈಗಿನ ನಟರಲ್ಲೇ ಅತ್ಯಂತ್ ಫಿಟ್ ಆಗಿದ್ದ ಪುನೀತ್ ರಾಜಕುಮಾರ್ ಅವರು ಹಠಾತ್ ಹೃದಯಾಘಾತಕ್ಕೊಳಗಾಗಿ ಅಕಸ್ಮಿಕ ಮರಣ ಹೊಂದಿದ ನಂತರ ಜನರಲ್ಲಿ ನಿತ್ಯ ವ್ಯಾಯಾಮ ಮಾಡುವ ಬಗ್ಗೆ, ಜಿಮ್ಗೆ ಹೋಗುವ ಬಗ್ಗೆ ಸಂದೇಹ ಮತ್ತು ಜಿಗುಪ್ಸೆ ಮೂಡಲಾರಂಭಿಸಿರುವುದು ಸುಳ್ಳಲ್ಲ. ಆದ್ಭುತವಾದ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಂಡು ಬಂದಿದ್ದ ಪುನೀತ್ ಅವರಿಗೆ ಹೃದಯಾಘಾತವಾಗುವದಾದರೆ, ವ್ಯಾಯಾಮ ಮಾಡಿ ಏನು ಪ್ರಯೋಜನ ಅಂತ ಬಹಳಷ್ಟು ಜನ ಭಾವಿಸುತ್ತಿದ್ದಾರೆ. ಅದರೆ, ನಾವೆಲ್ಲ ನೆನೆಪಿಟ್ಟುಕೊಳ್ಳಬೇಕಿರುವ ಸಂಗತಿಯೇನೆಂದರೆ, ವ್ಯಾಯಾಮದಿಂದ ದೇಹಕ್ಕೆ ಪ್ರಯೋಜನವೇ ಹೊರತು ಹಾನಿಯಿಲ್ಲ.
ವೈದ್ಯಲೋಕಕ್ಕೆ ಸವಾಲಾಗಿರುವ ಸಂಗತಿ ಅದಲ್ಲ. ಕಿರಿ ವಯಸ್ಸಿನವರಲ್ಲಿ ಅಂದರೆ 40 ಕ್ಕಿಂತ ಕಡಿಮೆ ವಯಸ್ಸಿ ಜನರಲ್ಲಿ ಹೃದ್ರೋಗ ಕಾಣಿಸುತ್ತಿರುವುದು, ಹೃದಯಾಘಾತ ಆಗುತ್ತಿರೋದು ಕಳವಳಕಾರಿ ಅಂಶವಾಗಿದೆ. ಈ ಕುರಿತು, ಜಯದೇವ ಆಸ್ಪತ್ರೆ ಹೃದ್ರೋಗ ವಿಭಾಗದ ಯಂಗ್ ಏಜ್ ಹಾರ್ಟ್ ಅಟ್ಯಾಕ್ ಡಿವಿಜನ್ ನ ಮುಖ್ಯಸ್ಥ ಮತ್ತು ಹೃದ್ರೋಗ ತಜ್ಞರಾಗಿರುವ ಡಾ ರಾಹುಲ ಪಾಟೀಲ ಅವರು ಟಿವಿ9 ಜೊತೆ ಮಾತಾಡಿದರು. ವಿಪರ್ಯಾಸದ ಸಂಗತಿಯೆಂದರೆ, ಈ ಅಭಿಯಾನಕ್ಕೆ ಪುನೀತ್ ರಾಜಕುಮಾರ್ ಅವರೇ ರಾಯಭಾರಿಯಾಗಿದ್ದರು.
ಡಾ ಪಾಟೀಲ ಹೇಳುವ ಹಾಗೆ, ಕಳೆದ 5 ವರ್ಷಗಳಲ್ಲಿ 40ಕ್ಕಿಂತ ಕಡಿಮೆ ವಯಸ್ಸಿನವರು ಹೃದ್ರೋಗದಿಂದ ಬಳಲುತ್ತಿರುವ ಪ್ರಮಾಣ ಶೇಕಡಾ 22 ರಷ್ಟು ಹೆಚ್ಚಾಗಿದೆಯಂತೆ. ದಿನಕ್ಕೆ ಕನಿಷ್ಟ 2-3 ಜನ ಅವರಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ; ಯೂರೋಪ್ ಹಾಗೂ ಇತರ ಖಂಡಗಳ ದೇಶದ ಜನರಿಗೆ ಹೋಲಿಸಿದರೆ, ಹೃದಯಾಘಾತಕ್ಕೊಳಗಾಗುವ ಪ್ರಮಾಣ 3 ರಿಂದ 5 ಪಟ್ಟು ಜಾಸ್ತಿಯಿದೆ.
ಈ ಹಿನ್ನೆಲೆಯಲ್ಲಿ ಯಂಗ್ ಏಜ್ ಹಾರ್ಟ್ ಅಟ್ಯಾಕ್ ವಿಭಾಗವು, ಕಿರಿ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗುವರ ಮಾಹಿತಿಯನ್ನು ಸಂಗ್ರಹಿಸಿ ಸಂಶೋಧನೆ ನಡೆಸುತ್ತಿದೆ ಎಂದು ಡಾ ರಾಹುಲ ಹೇಳುತ್ತಾರೆ. ಯಂಗ್ ಏಜ್ ಹಾರ್ಟ್ ಅಟ್ಯಾಕ್ ವಿಭಾಗವು ನ್ಯಾಶನಲ್ ಸೆಂಟರ್ ಫಾರ್ ಹ್ಯುಮನ್ ಜೆನೆಟಿಕ್ಸ್ ಸಂಸ್ಥೆಯೊಂದಿಗೆ ಸೇರಿ, ಜೆನೆಟಿಕ್ ಬಯೊ ಬ್ಯಾಂಕ್ ಓಪನ್ ಮಾಡಿದೆ. ಇಲ್ಲಿ ರೋಗಿಗಳ ರಕ್ತದ ನಮೂನೆಯನ್ನು ಸಂಗ್ರಹಿಸಿ ಜೀನ್ ಅನಾಲಿಸಿಸ್ ಮಾಡಲಾಗುತ್ತಿದೆ ಎಂದು ಡಾ ರಾಹುಲ ಹೇಳುತ್ತಾರೆ.
ಅದಲ್ಲದೆ, ನಿಮ್ಹಾನ್ಸ್ ಜೊತೆ ಕೈ ಜೋಡಿಸಿ ಸ್ಮೋಕಿಂಗ್ ಡಿಅಡಿಕ್ಷನ್, ಸ್ಟ್ರೆಸ್ ಅನಾಲಿಸಿಸ್ ಹಾಗೂ ಸೆಂಟ್ ಜಾನ್ಸ್ ಸಂಶೋಧನಾ ಕೇಂದ್ರದ ಸಹಭಾಗಿತ್ವದಲ್ಲಿ ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಲಾಗುತ್ತಿದೆಯಂತೆ.
ಇದನ್ನೂ ಓದಿ: ಬೆಂಗಳೂರಿನ ಎಸ್ಆರ್ವಿ ಥಿಯೇಟರ್ನಲ್ಲಿ ಕೊನೆಯದಾಗಿ ಅಟೆಂಡ್ ಮಾಡಿದ್ದ ಪುನೀತ್; ಇಲ್ಲಿದೆ ಸಿಸಿಟಿವಿ ವಿಡಿಯೋ