ಅನಾಹುತ ತಪ್ಪಿಸಿ ಪ್ರಯಾಣಿಕರ ಜೀವ ಉಳಿಸಿದ ಕೆಎಸ್ ಆರ್ ಟಿಸಿ ಬಸ್ ಚಾಲಕನನ್ನು ಗ್ರಾಮಸ್ಥರು ಹೊಗಳಿದರೆ ಡಿಪೋ ಅಧಿಕಾರಿಗಳು ತೆಗಳಿದರು!
ಪ್ರಯಾಣಿಕರ ಜೀವವುಳಿಸಿದ ಬಸ್ ಚಾಲಕ ಗಣೇಶರನ್ನು ಗ್ರಾಮಸ್ಥರು ಕೊಂಡಾಡಿದರೆ, ಅಪಘಾತ ಆಗಿದ್ದಕ್ಕೆ ಸಂಬಂಧಪಟ್ಟ ಡಿಪೋದ ಅಧಿಕಾರಿಗಳು ತೆಗಳಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ಸಿನ ಚಾಲಕರೊಬ್ಬರು ರಸ್ತೆ ಗುಂಡಿಯನ್ನು ತಪ್ಪಿಸುವ ಪ್ರಯತ್ನದಲ್ಲಿದ್ದಾಗ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿ ಪ್ರಯಾಣಿಕರ (passengers) ಪ್ರಾಣ ಉಳಿಸಲು ಪಕ್ಕದಲ್ಲಿದ್ದ ಮರವೊಂದಕ್ಕೆ ಬಸ್ಸನ್ನು ಡಿಕ್ಕಿ ಹೊಡಿಸಿ ಬಸ್ಸನ್ನು ನಿಲ್ಲಿಸಿದ ಪ್ರಸಂಗ ನೆಲಮಂಗದ (Nelamangala) ಬಳಿಯಿರುವ ಕಳಲುಘಟ್ಟ ಗ್ರಾಮದಲ್ಲಿ ನಡೆದಿದೆ. ಬಸ್ ನಲ್ಲಿ ಸುಮಾರು 50 ಜನ ಪ್ರಯಾಣಿಕರಿದ್ದರೆಂದು ಹೇಳಲಾಗಿದೆ. ಪ್ರಯಾಣಿಕರ ಜೀವವುಳಿಸಿದ ಬಸ್ ಚಾಲಕ ಗಣೇಶರನ್ನು ಗ್ರಾಮಸ್ಥರು ಕೊಂಡಾಡಿದರೆ, ಅಪಘಾತ ಆಗಿದ್ದಕ್ಕೆ ಸಂಬಂಧಪಟ್ಟ ಡಿಪೋದ ಅಧಿಕಾರಿಗಳು ತೆಗಳಿದ್ದಾರೆ. ಹಾಗಾಗೇ, ಅವರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ