ಮಂಗಳೂರು: ಕಣ್ಣೂರು ಬಳಿ ಗುಡ್ಡದ ಕೆಳಗೆ ವಾಸಿಸುವ ಜನಕ್ಕೆ ಪ್ರತಿದಿನ ಗುಡ್ಡ ಕುಸಿತದ ಭೀತಿ
ಕೊಂಚ ದೂರದಲ್ಲಿ ವಾಸವಾಗಿರುವ ಫೈಜಲ್ ಎನ್ನುವವರು ನಮ್ಮ ವರದಿಗಾರನೊಂದಿಗೆ ಮಾತಾಡಿದ್ದಾರೆ. ನಿನ್ನೆ ರಾತ್ರಿ ಗುಡ್ಡ ಕುಸಿದಾಗ ಮೇಲಿಂದ ಮಣ್ಣು ಮತ್ತು ನೀರು ಹರಿದು ಬಂದಿದೆ. ಬಹಳ ಕಷ್ಟಪಟ್ಟು ಮನೆಗಳನ್ನು ಕಟ್ಟಿಕೊಂಡಿರುವ ಜನ ಸುರಕ್ಷಿತ ಸ್ಥಳಗಳಿಗೆ ಧಾವಿಸಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಗುಡ್ಡಕ್ಕೆ ತಡೆಗೋಡೆ ಕಟ್ಟಿದರೆ ಅದರಿಂದ ಆನಾಹುತ ತಪ್ಪಲಾರದು. ಮೇಲಿಂದ ಕೆಳಗೆ ಉರುಳುವ ಕಲ್ಲು-ಮಣ್ಣು ಮತ್ತು ನೀರಿನ ರಭಸವನ್ನು ತಡೆಗೋಡೆ ಎಷ್ಟು ದಿನ ತಡೆಯಬಲ್ಲದು?
ಮಂಗಳೂರು, ಜೂನ್ 17: ಇಲ್ಲಿನ ಮನೆಗಳಲ್ಲಿ ವಾಸವಾಗಿರುವ ಅದೆಷ್ಟು ಅಪಾಯಕಾರಿ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಅಂತ ಗಮನಿಸಿದರೆ ಭಯವಾಗುತ್ತದೆ. ಗುಡ್ಡದ ಕೆಳಗಿರುವ ಊರು ಯಾವತ್ತೂ ವಾಸಕ್ಕೆ ಸೇಫ್ ಅಲ್ಲ ಮಾರಾಯ್ರೇ. ಕಣ್ಣೂರಿನ (Kannur) ದಯಂಬುವಿನಲ್ಲಿರುವ ನಾಲ್ಕಾರು ಮನೆಗಳಲ್ಲಿ ವಾಸವಾಗಿರುವ ಜನ ನಿಜಕ್ಕೂ ಅದೃಷ್ಟವಂತರು. ನಿರಂತರವಾಗಿ ಸುರಿಯುತ್ತಿರುವ ಮಳೆ ಕಾರಣ ಗುಡ್ಡ ಕುಸಿಯುತ್ತಿದೆ ಮತ್ತು ಗುಡ್ಡ ಮೇಲಿಂದ ನೀರು ಜಲಪಾತಗಳಲ್ಲಂತೆ ಹರಿಯುತ್ತಿರುವುದರಿಂದ ಗುಡ್ಡದ ಮಣ್ಣ ಶಿಥಿಲಗೊಳ್ಳುತ್ತಿದೆ. ನಮ್ಮ ವರದಿಗಾರ ತೋರಿಸುತ್ತಿರುವ ಮನೆಯಲ್ಲಿ ವಾಸವಾಗಿರುವ ಕುಟುಂಬ ರಾತ್ರಿ ಗುಡ್ಡಕುಸಿತ ಉಂಟಾದಾಗ ತಮ್ಮ ಜೀವ ಉಳಿಸಿಕೊಂಡಿದ್ದು ಸೋಜಿಗದ ಸಂಗತಿ.
ಇದನ್ನೂ ಓದಿ: ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ: ಕುಮಟಾ-ಶಿರಸಿ ಸಂಪರ್ಕ ಸಂಪೂರ್ಣ ಕಡಿತ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
