Gruesome accident near T Narasipura; ಖಾಸಗಿ ಬಸ್ 120 ಕಿಮೀ/ ಗಂಟೆ ವೇಗದಲ್ಲಿ ಚಲಿಸುತ್ತಿದ್ದುದ್ದರಿಂದ ಅಪಘಾತ ಸಂಭವಿಸಿತು: ಸ್ಥಳೀಯರು

Gruesome accident near T Narasipura; ಖಾಸಗಿ ಬಸ್ 120 ಕಿಮೀ/ ಗಂಟೆ ವೇಗದಲ್ಲಿ ಚಲಿಸುತ್ತಿದ್ದುದ್ದರಿಂದ ಅಪಘಾತ ಸಂಭವಿಸಿತು: ಸ್ಥಳೀಯರು

ಅರುಣ್​ ಕುಮಾರ್​ ಬೆಳ್ಳಿ
|

Updated on: May 29, 2023 | 6:19 PM

ಖಾಸಗಿ ಬಸ್ ಚಾಲಕರು ಪ್ರಯಾಣಿಕರನ್ನು ತುಂಬಿಸಿಕೊಳ್ಳಲು ಸ್ಪರ್ಧೆಗೆ ಬಿದ್ದು ಭಯಾನಕ ವೇಗದಲ್ಲಿ ಬಸ್ ಗಳನ್ನು ಓಡಿಸುತ್ತಾರಂತೆ.

ಮೈಸೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಭೀಕರ ಅಪಘಾತ ಇದು ಅಂದರೆ ತಪ್ಪಾಗಲಾರದು, ಇಂದು ಮಧ್ಯಾಹ್ನ ಟಿ ನರಸೀಪುರ (T Narasipura) ತಾಲ್ಲೂಕಿನ ಕುರುಬೂರು ಬಳಿ ಖಾಸಗಿ ಬಸ್ ಮತ್ತು ಇನ್ನೋವಾ ಕಾರು ಮಧ್ಯೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಕಾರಿನಲ್ಲಿ ಪಯಣಿಸುತ್ತಿದ್ದ 3 ಮಕ್ಕಳು ಮತ್ತು 3 ಮಹಿಳೆ ಸೇರಿಂದಂತೆ ಒಟ್ಟು 10 ಜನನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ನಲ್ಲಿದ್ದ 16 ಜನರಿಗೆ ಗಾಯಗಳಾಗಿವೆ ಮತ್ತು ಅವರನ್ನು ಟಿ ನರಸೀಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಖಾಸಗಿ ಬಸ್ ಚಾಲಕ (private bus driver) ಭಾರೀ ವೇಗದಲ್ಲಿ ವಾಹನ ಓಡಿಸುತ್ತಿದ್ದ ಕಾರಣ ಅಫಘಾತ ಸಂಭವಿಸಿದೆ. ಅಪಘಾತ ನಡೆದ ಸ್ಥಳದ ಹತ್ತಿರದಲ್ಲೇ ಒಂದು ಟೋಲ್ ಪ್ಲಾಜಾ (toll plaza) ಇದ್ದು, ಅಲ್ಲಿನ ರಸ್ತೆ ತಿರುವಿನಿಂದ ಕೂಡಿದೆ. ರಸ್ತೆಗುಂಟ ಗಿಡಮರಗಳು ಬೆಳೆದಿರುವುದರಿಂದ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಕಾಣೋದಿಲ್ಲ. ಟೋಲ್ ಪ್ಲಾಜಾ ಅವರಿಗೆ ಆ ಬಗ್ಗೆ ದೂರು ಸಲ್ಲಿಸಿದರೂ ಗಿಡಮರಗಳನ್ನು ತೆಗೆಸುವ ಕೆಲಸ ನಡೆದಿಲ್ಲ. ಸ್ಥಳೀಯರು ಹೇಳುವ ಮತ್ತೊಂದು ಸಂಗತಿಯೆಂದರೆ ಖಾಸಗಿ ಬಸ್ ಚಾಲಕರು ಪ್ರಯಾಣಿಕರನ್ನು ತುಂಬಿಸಿಕೊಳ್ಳಲು ಸ್ಪರ್ಧೆಗೆ ಬಿದ್ದು ಭಯಾನಕ ವೇಗದಲ್ಲಿ ಬಸ್ ಗಳನ್ನು ಓಡಿಸುತ್ತಾರಂತೆ. ಅಂಥ ಚಾಲಕನೊಬ್ಬನ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಡ್ರೈವಿಂಗ್ ಗೆ 10 ಅಮಾಯಕ ಜೀವಗಳು ಬಲಿಯಾಗಿವೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ