ಗೌರಿಗಣೇಶ ಹಬ್ಬದ ಖರೀದಿಗಾಗಿ ಕೆಅರ್ ಮಾರ್ಕೆಟ್​ಗೆ ಜನ ಲಗ್ಗೆ, ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ

Updated on: Aug 27, 2025 | 10:59 AM

ಮೊನ್ನೆ ವರಮಹಾಲಕ್ಷ್ಮಿ ಹಬ್ಬಕ್ಕೂ ಮಾರ್ಕೆಟ್ ಹೀಗೆಯೇ ಜನರಿಂದ ಗಿಜುಗುಡುತಿತ್ತು. ಮಾರುಕಟ್ಟೆಗೆ ತೆರಳುವ ಎಲ್ಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನಮ್ಮ ಕೆಮೆರಾಮನ್ ಈ ದೃಶ್ಯವನ್ನು ಫ್ಲೈಓವರ್ ಮೇಲಿಂದ ಸೆರೆ ಹಿಡಿದಿದ್ದಾರೆ. ಬಿಎಂಟಿಸಿ ಬಸ್ಸುಗಳು, ಕಾರುಗಳು ಆಮೆಗತಿಯಲ್ಲಿ ಮುಂದೆ ಸಾಗುತ್ತಿವೆ. ಇಲ್ಲಿ ಪಾರ್ಕಿಂಗ್​ಗೆ ಸೂಕ್ತವಾದ ಜಾಗ ಇಲ್ಲದಿರುವುದರಿಂದ ಜನ ಮನಬಂದಂತೆ ತಮ್ಮ ವಾಹನಗಳನ್ನು ನಿಲ್ಲಿಸಿರುತ್ತಾರೆ.

ಬೆಂಗಳೂರು, ಆಗಸ್ಟ್ 27: ಇದು ಜಾತ್ರೆಯಲ್ಲ, ನಗರದ ಕೆಅರ್ ಮಾರ್ಕೆಟ್! ಹಬ್ಬದ ಖರೀದಿಯಲ್ಲಿ ತೊಡಗಿರುವ ಜನ ಬೆಲೆಯೇರಿಕೆ ಬಿಸಿ ಜೋರಾಗೇ ತಟ್ಟಿದರೂ ಕೊಳ್ಳುವುದನ್ನು ಮಾತ್ರ ಅವ್ಯಾಹತವಾಗಿ ಮಾಡುತ್ತಿದ್ದಾರೆ. ನಮ್ಮ ಬೆಂಗಳೂರು ವರದಿಗಾರ ಹೇಳುವಂತೆ ಬೆಳಗ್ಗೆ 4 ಗಂಟೆಯಿಂದಲೇ ಜನ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ ಮತ್ತು ಗಣಪನ ಪೂಜೆಗೆ ಬೇಕಿರುವ ಸಾಮಗ್ರಿಗಳನ್ನು ಕೊಳ್ಳುತ್ತಿದ್ದಾರೆ. ಮಲ್ಲಿಗೆ, ಕನಕಾಂಬರ, ಸೇವಂತಿ ಮೊದಲಾದ ಎಲ್ಲ ಹೂಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದ್ದರೂ ಜನ ದುಂಬಾಲು ಬಿದ್ದು ಖರೀದಿಸುತ್ತಿದ್ದಾರೆ. ಬಾಳೆದಿಂಡು, ತೋರಣ ಕಟ್ಟಲು ಉಪಯೋಗಿಸುವ ಮಾವಿನ ಎಲೆ ಕೂಡ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಅಂದಹಾಗೆ, ಒಂದೊಂದು ಹೂವಿನ  ಹಾರ ₹ 1,000 ಕ್ಕೆ ಮಾರಾಟವಾಗುತ್ತಿದೆ!

ಇದನ್ನೂ ಓದಿ:  ಕೆಅರ್ ಮಾರ್ಕೆಟ್ ಫ್ಲೈಓವರ್ ಮೇಲೆ ಅಡ್ಡಾದಿಡ್ಡಿ ಕಾರುಗಳ ಪಾರ್ಕಿಂಗ್, ವಾಹನಸವಾರರಿಗೆ ತೊಂದರೆ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ