ಗೌರಿ-ಗಣೇಶ ಹಬ್ಬ; ಕೆಅರ್ ಮಾರ್ಕೆಟ್ಗೆ ಲಗ್ಗೆಯಿಟ್ಟ ಮಹಿಳೆಯರು, ಹೂವು-ಹಣ್ಣು ಬೆಲೆ ಎಂದಿನಂತೆ ದುಬಾರಿ
ಮಂಜುಳಾ ಹೆಸರಿನ ಯುವತಿಯೂ ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿದ್ದು ಅವರು ಹೇಳುವ ಪ್ರಕಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಲಿಸಿದರೆ ಈ ಹಬ್ಬಕ್ಕೆ ಕೊಂಚ ಬೆಲೆ ಕಡಿಮೆ ಅನಿಸುತ್ತದೆ, ಆದರೆ ಮಾಡುಕಟ್ಟೆಯಲ್ಲಿ ಜನ ಜಾತ್ರಯಂತೆ ನೆರೆದಿದ್ದಾರೆ, ಬೆಲೆ ಪ್ರತಿವರ್ಷ ಜಾಸ್ತಿಯಾಗುತ್ತಲೇ ಇರುತ್ತದೆ, ಅದನ್ನು ತಡೆಯಲಾಗಲ್ಲ, ಅದರೆ ಹಬ್ಬಗಳನ್ನಂತೂ ಮಾಡಲೇ ಬೇಕಲ್ವಾ ಎಂದು ಹೇಳುತ್ತಾರೆ.
ಬೆಂಗಳೂರು, ಆಗಸ್ಟ್ 25: ನಾಳೆ ಗೌರಿ ಗಣೇಶ ಹಬ್ಬ, ಸ್ವರ್ಣ ಗೌರಿ ವ್ರತಕ್ಕೆ (Swarna Gowri Vratha) ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಹಬ್ಬ ಬಂತು ಅಂತಾದರೆ ನಗರದ ಕೆಆರ್ ಮಾರ್ಕೆಟ್ ಗ್ರಾಹಕರಿಂದ ಕಿಕ್ಕಿರಿದಂತೆ ನೆರೆದುಬಿಡುತ್ತದೆ. ಹೂವು-ಹಣ್ಣು ಮತ್ತು ತರಕಾರಿಗಳ ಖರೀದಿಗೆ ಗೃಹಿಣಿಯರೇ ಆಗಬೇಕು. ಎಂದಿನಂತೆ ಹಬ್ಬಗಳ ಸೀಸನಲ್ಲಿ ಹೂವು-ಹಣ್ಣುಗಳ ಬೆಲೆ ಮುಗಿಲು ಮುಟ್ಟಿದೆ. ಖರೀದಿಗೆ ಬಂದಿರುವ ಮಹಿಳೆಯರು ನಮ್ಮ ವರದಿಗಾರನೊಂದಿಗೆ ಮಾತಾಡುತ್ತಾ ಅದನ್ನೇ ಹೇಳಿದ್ದಾರೆ. ಸುಗಂಧಭರಿತ ಹೂವುಗಳ ಬೆಲೆ ತುಂಬಾ ಜಾಸ್ತಿಯೆಂದು ಲಕ್ಷ್ಮಿ ಹೆಸರಿಬ ಗೃಹಿಣಿ ಹೇಳುತ್ತಾರೆ. ವ್ಯಾಪಾರಸ್ಥರೊಂದಿಗೆ ಚೌಕಾಶಿ ಮಾಡುವಂತೆಯೇ ಇಲ್ಲ, ಅವರು ಹೇಳಿದಷ್ಟು ದುಡ್ಡು ಕೊಡಬೇಕು ಎಂದು ಅವರು ಹೇಳುತ್ತಾರೆ.
ಇದನ್ನು ಓದಿ: ವರಮಹಾಲಕ್ಷ್ಮಿ ಹಬ್ಬ: ಕೆಆರ್ ಮಾರ್ಕೆಟ್ನಲ್ಲಿ ಹೂವಿನ ವ್ಯಾಪಾರಿಗಳ ಜೊತೆ ಗ್ರಾಹಕ ಮಹಿಳೆಯರೂ ಖುಷ್!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

