AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರಮಹಾಲಕ್ಷ್ಮಿ ಹಬ್ಬ: ಕೆಆರ್ ಮಾರ್ಕೆಟ್​ನಲ್ಲಿ ಹೂವಿನ ವ್ಯಾಪಾರಿಗಳ ಜೊತೆ ಗ್ರಾಹಕ ಮಹಿಳೆಯರೂ ಖುಷ್!

ವರಮಹಾಲಕ್ಷ್ಮಿ ಹಬ್ಬ: ಕೆಆರ್ ಮಾರ್ಕೆಟ್​ನಲ್ಲಿ ಹೂವಿನ ವ್ಯಾಪಾರಿಗಳ ಜೊತೆ ಗ್ರಾಹಕ ಮಹಿಳೆಯರೂ ಖುಷ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 08, 2025 | 11:44 AM

Share

ಖರೀದಿಗೆ ಅಂತ ಬಂದವರು ತಮ್ಮ ಅನುಭವವನ್ನು ಹಾಗೆ ಹೇಳಿಕೊಂಡರೆ ವ್ಯಾಪಾರಿಗಳ ಭಾರೀ ಸಂತಸದಲ್ಲಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ವ್ಯಾಪಾರಿ ಅನ್ನಪೂರ್ಣ ರಾತ್ರಿ 10 ಗಂಟೆಗೆ ಬಂದು ಇದುವರೆಗೆ ಒಂದು ಲಕ್ಷ ರೂ. ಮೌಲ್ಯದ ಹೂ ಮಾರಿದ್ದಾರೆ. ಪೀಣ್ಯ 2 ನೇ ಹಂತದಿಂದ ಬರುವ ಇನ್ನೊಬ್ಬ ಮಹಿಳಾ ವ್ಯಾಪಾರಿ ನಿನ್ನೆ ಸುರಿದ ಮಳೆಯಿಂದ ಹೂವು ಸ್ವಲ್ಪ ಹಾಳಾಗಿದೆ, ಹಾಕಿದ ಬಂಡವಾಳ ಬಂದಿದೆ ಎನ್ನುತ್ತಾರೆ. ಈ ವ್ಯಾಪಾರಿಗಳೆಲ್ಲ ಮುಂದಿನ ವಾರ ಹಬ್ಬ ಮಾಡುತ್ತಾರಂತೆ.

ಬೆಂಗಳೂರು, ಆಗಸ್ಟ್ 8: ಇವತ್ತು ವರಮಹಾಲಕ್ಷ್ಮಿ ಹಬ್ಬ. ನಗರದ ಕೆಆರ್ ಮಾರ್ಕೆಟ್​ನಲ್ಲಿ (KR Market) ಹೂವು, ಹಣ್ಣು ಮತ್ತು ಬೇರೆ ಪೂಜಾ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಹೂಮಾರುವವರು ನಿನ್ನೆ ರಾತ್ರಿ 10 ಗಂಟೆಯಿಂದಲೇ ಮಾರ್ಕೆಟ್​ಗೆ ಬಂದು ವ್ಯಾಪಾರ ಆರಂಭಿಸಿದ್ದಾರೆ. ಗೃಹಿಣಿಯರು ಸುವಾಸನೆಭರಿತ ಹೂವುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮಲ್ಲಿಗೆ ಎಲ್ಲರಿಗೂ ಸಿಗುತ್ತಿದೆ, ಆದರೆ ಸಂಪಿಗೆ, ಜಾಜಿ, ಕನಕಾಂಬರ ಮೊದಲಾದ ಹೂಗಳು ಸಿಗುತ್ತಿಲ್ಲ ಎಂದು ಕಬ್ಬನ್ ಪೇಟೆಯ ಸೌಮ್ಯ ಹೇಳುತ್ತಾರೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಎಲ್ಲ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯೆಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಆದರೆ ಹಬ್ಬದ ಸಂತೆ ಮಾಡಲು ಬಂದಿರುವ ಡಾ ಅಶ್ವಥಾ ಅವರಿಗೆ ಬೆಲೆಗಳು ಹೆಚ್ಚು ಅನಿಸುತ್ತಿಲ್ಲ. ಹೊರಗಡೆ ಸಿಗುವ ವಸ್ತುಗಳ ಬೆಲೆಗೆ ಕಂಪೇರ್ ಮಾಡಿದರೆ ಕೆಅರ್ ಮಾರ್ಕೆಟ್​ನಲ್ಲಿ ಕಡಿಮೆ ಎನ್ನುತ್ತಾರೆ.

ಇದನ್ನೂ ಓದಿ:  Varamahalakshmi Festival 2025: ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಗಳನ್ನೇ ಕೊಡುವುದೇಕೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ