ನಾಳೆ ವರಮಹಾಲಕ್ಷ್ಮಿ ಹಬ್ಬ; ಬೆಂಗಳೂರಿನ ಕೆ ಅರ್ ಮಾರ್ಕೆಟ್ ನಲ್ಲಿ ಹೂವು-ಹಣ್ಣು ಖರೀದಿಗೆ ಜನಸಾಗರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 04, 2022 | 11:48 AM

ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆ ಆರ್ ಮಾರ್ಕೆಟ್ ನಲ್ಲಿ ಗುರುವಾರ ಬೆಳಗ್ಗೆಯೇ ಜನಸಾಗರ, ಹಬ್ಬಕ್ಕಾಗಿ ಹೂವು ಹಣ್ಣು ತರಕಾರಿ ಖರೀದಿಗೆ ಮುಗಿಬಿದ್ದ ಜನರು.

ಬೆಂಗಳೂರು:  ಬೆಳಗಿದರೆ ವರಮಹಾಲಕ್ಷ್ಮೀ ಹಬ್ಬ (Vara Mahalakshmi Festival) ಮಾರಾಯ್ರೇ! ಅಸಲಿಗೆ ಆಗಸ್ಟ್ (August) ಶುರುವಾದರೆ ಸಾಕು ಒಂದರ ನಂತರ ಒಂದು ಹಬ್ಬಗಳು. ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆ ಆರ್ ಮಾರ್ಕೆಟ್ ನಲ್ಲಿ (KR Market) ಗುರುವಾರ ಬೆಳಗ್ಗೆಯೇ ಜನಸಾಗರ, ಹಬ್ಬಕ್ಕಾಗಿ ಹೂವು ಹಣ್ಣು ತರಕಾರಿ ಖರೀದಿಗೆ ಮುಗಿಬಿದ್ದ ಜನರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಹೂವು ಮತ್ತು ಹಣ್ಣಗಳ ಬೆಲೆಯಲ್ಲಿ ರೂ. 30 ರಿಂದ ರೂ. 50 ರವರೆಗೆ ಹೆಚ್ಚಾಗಿದೆ.