ಕೆಅರ್ ಎಸ್ ಜಲಾಶಯದಿಂದ ಹರಿಬಿಟ್ಟ ನೀರಿನ ರಭಸಕ್ಕೆ ನಗುವನ ತೋಟದ ತಡೆಗೋಡೆ ಕುಸಿತ!

|

Updated on: Jul 24, 2024 | 12:03 PM

ಕರ್ತವ್ಯದಲ್ಲಿ ನಿರ್ಲಕ್ಷ್ಯಮತ್ತು ಬೇಜವಾಬ್ದಾರಿತ ಪ್ರದರ್ಶಿಸುವ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿಗೊಳಿಸುವುದು ಅತ್ಯಂತ ಅವಶ್ಯಕ ಎಂದೆನಿಸುತ್ತದೆ. ಅವರು ಮಾಡುವ ತಪ್ಪುಗಳಿಗೆ ತಮ್ಮ ದುಡಿಮೆಯಿಂದ ತೆರಿಗೆ ಕಟ್ಟುವ ಕನ್ನಡಿಗರ ದುಡ್ಡು ವ್ಯಯ ಆಗೋದು ಸರಿಯಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ ನಗವನ ತೋಟಕ್ಕೆ ತಡೆಗೋಡೆಯನ್ನು ಇತ್ತೀಚಿಗಷ್ಟೇ ನಿರ್ಮಿಸಲಾಗಿತ್ತು.

ಮಂಡ್ಯ: ಈ ಅನಾಹುತದಿಂದ ಆಗಿರುವ ನಷ್ಟ ಮತ್ತು ಹಾನಿಯನ್ನು ಇದಕ್ಕೆ ಕಾರಣರಾದ ಬೇಜವಾಬ್ದಾರಿ ಅಧಿಕಾರಿಗಳಿಂದ ಭರಿಸಿಕೊಳ್ಳಲಾಗುವುದೆ? ಕನ್ನಡಿಗರ ಪ್ರಶ್ನೆ ಇದು. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ ಎಸ್ ಜಲಾಶಯದಿಂದ ಬಿಡುಗಡೆಯಾಗಿರುವ ನೀರಿನ ದೃಶ್ಯವಿದು. ನೀರು ಬಿಡುಗಡೆ ಮಾಡಿದಾಗ ಡ್ಯಾಂ ಮುಂಭಾಗದಲ್ಲಿ ನಗುವನ ತೋಟಕ್ಕೆ ಅದು ನುಗ್ಗಬಾರದು ಮತ್ತು ತೋಟ ಹಾಳಾಗಬಾರದೆನ್ನುವ ಕಾರಣಕ್ಕೆ ತೋಟಕ್ಕೆ ಲಕ್ಷಾಂತರ ರೂ. ವೆಚ್ಚದಲ್ಲಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಅದರೆ ಜಲಾಶಯದಿಂದ ಹೊರ ಹರಿದ ನೀರಿನ ರಭಸಕ್ಕೆ ತಡೆಗೋಡೆಯ ಸ್ವಲ್ಪ ಭಾಗ ಕುಸಿದುಬಿಟ್ಟಿದೆ. ನೀರನ್ನು ಮೊದಲು ಕಡಿಮೆ ಪ್ರಮಾಣದಲ್ಲಿ ಹರಿಬಿಟ್ಟು ನಂತರ ಕ್ರಮೇಣವಾಗಿ ಹೆಚ್ಚಿಸಿದ್ದರೆ ತಡೆಗೋಡೆ ಕುಸಿಯುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಕಾವೇರಿ ನಿಗಮದ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಅನಾಹುತ ಜರುಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಗಂಗಾರತಿ‌ ಮಾದರಿಯಲ್ಲಿ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಆರತಿ: ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ

Follow us on