ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?

Edited By:

Updated on: May 17, 2026 | 3:44 PM

ನಿವೃತ್ತ ಸೈನಿಕನ ತಲೆಗೆ ಕಬ್ಬಿಣ್ಣದ ರಾಡ್​ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿಯ ರಾಮಮಂದಿರ ಬಳಿ ನಡೆದಿದೆ. 4 ವರ್ಷದ ಹಿಂದೆ ಬಿಎಸ್ಎಫ್​ನಿಂದ ನಿವೃತ್ತಿಯಾಗಿದ್ದ ರವಿಚಂದ್ರ ಖೇಡ್(45) ಕೊಲೆಯಾದ ಮಾಜಿ ಸೈನಿಕ. ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ ನನ್ನು ವಿವಾದಿತ ಜಾಗದ ಸಂಬಂಧ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಲಬುರಗಿ, (ಮೇ 17): ನಿವೃತ್ತ ಸೈನಿಕನ (retired BSF soldier) ತಲೆಗೆ ಕಬ್ಬಿಣ್ಣದ ರಾಡ್​ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿಯ (Kalaburagi) ರಾಮಮಂದಿರ ಬಳಿ ನಡೆದಿದೆ. 4 ವರ್ಷದ ಹಿಂದೆ ಬಿಎಸ್ಎಫ್​ನಿಂದ ನಿವೃತ್ತಿಯಾಗಿದ್ದ ರವಿಚಂದ್ರ ಖೇಡ್(45) ಕೊಲೆಯಾದ ಮಾಜಿ ಸೈನಿಕ. ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ ನನ್ನು ವಿವಾದಿತ ಜಾಗದ ಸಂಬಂಧ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿವಾದಿತ ಜಾಗದಲ್ಲಿ ಕಳೆದ ತಿಂಗಳು ಟಿನ್​ಶೆಡ್ ನಿರ್ಮಿಸಲಾಗಿತ್ತು. ಅದನ್ನು ವಿರೋಧಿ ರಾತ್ರೋರಾತ್ರಿ ಜೆಸಿಬಿಯಿಂದ ಕೆಡವಲಾಗಿತ್ತು. ಇದೇ ವಿಚಾರಕ್ಕೆ ವಿವಾದಿತ ಖಾಸಗಿ ಜಾಗದಲ್ಲೇ ರವಿಚಂದ್ರ ಖೇಡ್ ನನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಹತ್ಯೆಯಾದ ರವಿಚಂದ್ರ ಖೇಡ್ ಪತ್ನಿ ಕಣ್ಣೀರಿನೊಂದಿಗೆ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Loading...
Unable to load recommendations.
Follow Us
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More