ತಾನೇ ಹತ್ಯೆ ಮಾಡಿದ್ದು ಅಂತ ಪಲ್ಲವಿ ಓಂ ಪ್ರಕಾಶ್ ತಪ್ಪೊಪ್ಪಿಕೊಂಡಿದ್ದಾರೆ, ತನಿಖೆ ಮುಂದುವರಿದಿದೆ: ಪರಮೇಶ್ವರ್

Updated on: Apr 22, 2025 | 11:06 AM

ವಿಂಗ್ ಕಮಾಂಡರ್ ನಿಂದ ಹುಡುಗನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್ ನೀಡಿರುವ ದೂರಿನ ಮೇರೆಗೆ ಶಿಲಾದಿತ್ಯ ಬೋಸ್ ವಿರುದ್ಧ ಎಫ್​ಐಅರ್ ದಾಖಲಾಗಿದೆ, ಅವನು ಪಶ್ಚಿಮ ಬಂಗಾಳಕ್ಕೆ ಓಡಿಹೋಗಿದ್ದಾನೆ, ಅವನನ್ನು ಸೆಕ್ಯೂರ್ ಮಾಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.

ಬೆಂಗಳೂರು, ಏಪ್ರಿಲ್ 22: ನಿನಿವೃತ್ತ ಡಿಜಿ ಮತ್ತು ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwar), ಪ್ರಕರಣವನ್ನು ಸಿಸಿಬಿಗೆ ವಹಿಸಿಕೊಡಲಾಗಿದೆ, ಮೃತ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರನ್ನು ಸಿಸಿಬಿ ವಶಕ್ಕೆ ಪಡೆದಿದ್ದು, ತಾನೇ ಕೊಂದಿದ್ದು ಎಂದು ಅವರು ತಪ್ಪೊಪ್ಪಿಕೊಂಡಿದ್ದಾರೆ, ಪ್ರಕರಣದ ತನಿಖೆ ಮುಂದುವರಿದಿದೆ, ತನಿಖೆಯ ವಿವರಗಳನ್ನು ತಾನು ನೀಡಲಾಗಲ್ಲ ಎಂದು ಹೇಳಿದರು.

ಇದನ್ನೂ ಓದಿ:  ಓಂ ಪ್ರಕಾಶ್​ ಕೊಲೆ ಬಗ್ಗೆ ಮಗ ಹೇಳಿದ್ದೇನು?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ