ಸೇನೆಗೆ ಬಲ ತುಂಬಲು ಸಿದ್ಧ: ಹಾಸನದಲ್ಲಿ ನಿವೃತ್ತ ಯೋಧರ ಘೋಷಣೆ

Edited By:

Updated on: May 09, 2025 | 11:47 AM

ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಸಂದರ್ಭದಲ್ಲಿ ಮಾಜಿ ಯೋಧರು ಕೂಡ ಸೇನೆಗೆ ಬಲ ತುಂಬಲು ಸಿದ್ಧ ಎಂದು ಮುಂದೆ ಬರುತ್ತಿದ್ದಾರೆ. ಬಾಗಲಕೋಟೆಯ ನಿವೃತ್ತ ಯೋಧರ ಬೆನ್ನಲ್ಲೇ ಇದೀಗ ಹಾಸನದಲ್ಲಿಯೂ ನಿವೃತ್ತ ಸೈನಿಕರು ಕರೆ ಬಂದರೆ ಸೇನೆ ಜತೆ ಹೋರಾಡುವುದಾಗಿ ತಿಳಿಸಿದ್ದಾರೆ.

ಹಾಸನ, ಮೇ 9: ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನ ವಾತಾವರಣ ಹಿನ್ನೆಲೆ ಭಾರತೀಯ ಸೇನೆಗೆ ಬಲ‌ತುಂಬಲು ಮಾಜಿ ಸೈನಿಕರು ಸಜ್ಜಾಗಿದ್ದಾರೆ. ಹಾಸನದ ಉದಯಗಿರಿ ಬಡಾವಣೆಯಲ್ಲಿರುವ ಸೈನಿಕರ ಭವನದಲ್ಲಿ ತುರ್ತು ಸಭೆ ನಡೆಸಿದ ನಿವೃತ್ತ ಯೋಧರು, ಕರೆ ಬಂದರೆ ಸೇವೆ ಸಲ್ಲಿಸಲು ಸಿದ್ಧ ಎಂದು ಘೋಷಣೆ ಮಾಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ