ರೇವಣ್ಣ ಪ್ರಕರಣದ ತನಿಖೆ ಮುಕ್ತ ಮತ್ತು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ: ಎನ್ ಚಲುವರಾಯಸ್ವಾಮಿ

|

Updated on: May 06, 2024 | 4:54 PM

ರೇವಣ್ಣ ಆವರು ಮಾಜಿ ಸಚಿವ, ಹಾಲಿ ಶಾಸಕ ಮತ್ತು ಮಾಜಿ ಪ್ರಧಾನಿಯವರ ಮಗನಾಗಿರುವ ಜೊತೆಗೆ ಅವರ ಸಹೋದರ ಮಾಜಿ ಮುಖ್ಯಮಂತ್ರಿಯಾಗಿರುವ ಕಾರಣ, ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಆದರೆ ರೇವಣ್ಣ ಮನೆಯವರ ಪೈಕಿ ಯಾರೇ ಮುಖ್ಯಮಂತ್ರಿಯಾಗಿದ್ದರೂ ತನಿಖೆ ಹೀಗೆಯೇ ನಡೆಯುತಿತ್ತು ಎಂದು ಸಚಿವ ಹೇಳಿದರು.

ಬೆಂಗಳೂರು: ಹೆಚ್ ಡಿ ರೇವಣ್ಣ (HD Revanna) ಬಂಧನಕ್ಕೆ ಸಂಬಂಧಿಸಿದಂತೆ ತನಿಖೆ ಬಹಳ ಮುಕ್ತ ಮತ್ತು ಪಾರದರ್ಶಕವಾಗಿ ನಡೆಯುತ್ತಿದೆ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ತನಿಖೆಯಲ್ಲಿ ಯಾವುದೇ ರೀತಿ ಹಸ್ತಕ್ಷೇಪ (intervention) ಮಾಡುತ್ತಿಲ್ಲ ಮತ್ತು ತಮ್ಮ ಸರ್ಕಾರಕ್ಕೆ ಅದರ ಅವಶ್ಯಕತೆ ಇಲ್ಲ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಹೇಳಿದರು. ನಗರದದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ರೇವಣ್ಣ ಪ್ರಕರಣ ತನಿಖಾ ಸಂಸ್ಥೆ ಮತ್ತು ನ್ಯಾಯಾಲಯಕ್ಕೆ ಬಿಟ್ಟ ವಿಚಾರ, ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಹೇಳಿದರು. ರೇವಣ್ಣ ಆವರು ಮಾಜಿ ಸಚಿವ, ಹಾಲಿ ಶಾಸಕ ಮತ್ತು ಮಾಜಿ ಪ್ರಧಾನಿಯವರ ಮಗನಾಗಿರುವ ಜೊತೆಗೆ ಅವರ ಸಹೋದರ ಮಾಜಿ ಮುಖ್ಯಮಂತ್ರಿಯಾಗಿರುವ ಕಾರಣ, ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಆದರೆ ರೇವಣ್ಣ ಮನೆಯವರ ಪೈಕಿ ಯಾರೇ ಮುಖ್ಯಮಂತ್ರಿಯಾಗಿದ್ದರೂ ತನಿಖೆ ಹೀಗೆಯೇ ನಡೆಯುತಿತ್ತು ಎಂದು ಸಚಿವ ಹೇಳಿದರು. ಪ್ರಕರಣದಲ್ಲಿ ಕೆಅರ್ ನಗರ ಶಾಸಕ ರವಿಶಂಕರ್ ಪಾತ್ರವನ್ನು ತಳ್ಳಿಹಾಕಿದ ಚಲುವರಾಯಸ್ವಾಮಿ, ಆಯಮ್ಮನೇ (ಅಪಹೃತೆ) ಹೇಳಿಕೆ ನೀಡಿದ್ದಾರಲ್ಲ? ಬೇಡ ಬಿಡಿ ಅದರ ಬಗ್ಗೆ ಚರ್ಚೆ ಮಾಡೋದು ಬೇಡ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರತಿ ಚುನಾವಣೆಯಲ್ಲಿ ಧೋರಣೆ ಬದಲಿಸುವ ಕುಮಾರಸ್ವಾಮಿ ಯಾವ ಧರ್ಮಯುದ್ಧದ ಬಗ್ಗೆ ಮಾತಾಡುತ್ತಾರೆ? ಚಲುವರಾಯಸ್ವಾಮಿ