ಕಲಬುರಗಿ: ಪ್ರಿಯಾಂಕಾ ಗಾಂಧಿ ವೇದಿಕೆಗೆ ಬರೋದನ್ನು ಕಂಡು ಸ್ಟನ್ ಆಗುವ ರೇವಂತ್ ರೆಡ್ಡಿ ಸ್ವಲ್ಪ ಸಮಯ ಭಾಷಣ ನಿಲ್ಲಿಸಿಬಿಡುತ್ತಾರೆ!

|

Updated on: Apr 29, 2024 | 7:38 PM

ಏತನ್ಮಧ್ಯೆ, ಖರ್ಗೆ, ಪ್ರಿಯಾಂಕಾ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಒಂದು ಗಹನವಾದ ಚರ್ಚೆ ನಡೆಯುತ್ತದೆ. ಒಂದು ಹಂತದಲ್ಲಿ ಸೀನಿಯರ್ ಖರ್ಗೆ ಸಾಹೇಬರು ತಮ್ಮ ಮಗನಿಗೆ, ‘ನಿಂದೇ ಹೇಳ್ಬ್ಯಾಡ, ಅವ್ರು ಹೇಳಾದ್ ಬೀ  ಜರಾ ಕೇಳು!’ ಅಂದರೇನೋ ಅಂತ ಭಾಸವಾಗುತ್ತದೆ.

ಕಲಬುರಗಿ: ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ (Kalaburagi Congress convention) ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಭಾಗಿಯಾದರು. ಅವರು ವೇದಿಕೆಗೆ ಬರುವ ಮೊದಲು ತೆಲಂಗಾಂಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಸಭೆಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಕಲಬುರಗಿಯಲ್ಲಿ ತೆಲುಗು ಭಾಷಿಕರ ಸಂಖ್ಯೆ ತೀರ ಕಮ್ಮಿ, ಹಾಗಾಗಿ ರೆಡ್ಡಿಯವರು ತೆಲುಗಿನಲ್ಲಿ ಮಾತಾಡಿದ್ದರಿಂದ ಅವರ ಭಾಷಣ ಬಹಳಷ್ಟು ಜನರಿಗೆ ಅರ್ಥವಾಗಿರಲಿಕ್ಕಿಲ್ಲ. ಅದರೆ, ಪ್ರಿಯಾಂಕಾ ಗಾಂಧಿ ವೇದಿಕೆ ಹತ್ತುತ್ತಿದ್ದ ದೃಶ್ಯ ಕಂಡ ಕೂಡಲೇ ಜನರ ಹರ್ಷೋಲ್ಲಾಸ ಮುಗಿಲು ಮುಟ್ಟುತ್ತದೆ. ಒಂದು ಕ್ಷಣ ಗರಬಡಿದವರಂತಾಗುವ ರೇವಂತ್ ರೆಡ್ಡಿಯವರು ಪ್ರಿಯಾಂಕಾ ಬರುವ ದಿಕ್ಕಿನೆಡೆ ಮುಖ ಮಾಡಿ ನಿಂತುಬಿಡುತ್ತಾರೆ. ಪ್ರಿಯಾಂಕಾ ಜನರತ್ತ ಕೈ ಬೀಸಿ, ವೇದಿಕೆ ಮೇಲಿದ್ದ ಎಲ್ಲರಿಗೆ ನಮಸ್ಕರಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಆತ್ಮೀಯವಾಗಿ ಮಾತಾಡುತ್ತಾ ಚೇರ್ ನಲ್ಲಿ ಕೂರುವವರೆಗೆ ಭಾಷಣ ನಿಲ್ಲಿಸಿದ್ದ ರೆಡ್ಡಿ ತಮ್ಮ ಮಾತು ಮುಂದುವರಿಸುತ್ತಾರೆ. ಏತನ್ಮಧ್ಯೆ, ಖರ್ಗೆ, ಪ್ರಿಯಾಂಕಾ ಮತ್ತು ಪ್ರಿಯಾಂಕ್ ಖರ್ಗೆ ನಡುವೆ ಒಂದು ಗಹನವಾದ ಚರ್ಚೆ ನಡೆಯುತ್ತದೆ. ಒಂದು ಹಂತದಲ್ಲಿ ಸೀನಿಯರ್ ಖರ್ಗೆ ಸಾಹೇಬರು ತಮ್ಮ ಮಗನಿಗೆ, ‘ನಿಂದೇ ಹೇಳ್ಬ್ಯಾಡ, ಅವ್ರು ಹೇಳಾದ್ ಬೀ  ಜರಾ ಕೇಳು!’ ಅಂದರೇನೋ ಅಂತ ಭಾಸವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ: ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ 371 ಜೆ ವಿಧಿ ಜಾರಿಗೊಳ್ಳಲು ಮಲ್ಲಿಕಾರ್ಜುನ ಖರ್ಗೆ ಕಾರಣ: ಸಿದ್ದರಾಮಯ್ಯ

Follow us on