AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಳಿದ ಕೆಲಸ ಮಾಡದ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಂದ ಸಾರ್ವಜನಿಕ ತರಾಟೆ

ಹೇಳಿದ ಕೆಲಸ ಮಾಡದ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಂದ ಸಾರ್ವಜನಿಕ ತರಾಟೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2024 | 2:53 PM

ಮಳೆಗಾಲ ಶುರುವಾಗಲಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ತಮ್ಮ ಕ್ಷೇತ್ರ ಬ್ಯಾಟರಾಯನಪುರದಲ್ಲಿರುವ ರಾಜಾ ಕಾಲುವೆಯೊಂದರ ಹೂಳೆತ್ತಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಲು ಅವರು ಅಧಿಕಾರಿಗಳಿಗೆ ತಿಳಿಸಿ ಮೂರು ವಾರ ಕಳೆದರೂ ಅವರಿಂದ ಕೆಲಸವಾಗಿಲ್ಲದರುವುದು ನೋಡಿ ಅವರು ತಾಳ್ಮೆ ಕಳೆದುಕೊಂಡರು.

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ (Krishna Byre Gowda) ಅತ್ಯಂತ ದಕ್ಷ ಮತ್ತು ನೇರಮಾತುಗಾರಿಕೆಯ ನಾಯಕ ಅನ್ನೋದು ನಿರ್ವಿವಾದಿತ. ಕರ್ತವ್ಯಲೋಪವೆಸಗುವ, ಹೇಳಿದ್ದನ್ನು ಮಾಡದ ಅಧಿಕಾರಿಗಳನ್ನು ಅವರು ಮುಲಾಜಿಲ್ಲದೆ ಬೆಂಡೆತ್ತುತ್ತಾರೆ. ರಾಯಚೂರು ಜಿಲ್ಲಾ ಉಸ್ತುವಾರಿ (Raichur district in charge minister) ಸಚಿವರೂ ಆಗಿರುವ ಅವರು ಪ್ರಗತಿ ಪರಿಶೀಲನಾ ಸಭೆಗಳಲ್ಲಿ (KDP meeting) ಕೆಲಸ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋಗಳನ್ನು ನಾವು ತೋರಿಸಿದ್ದೇವೆ. ಮಳೆಗಾಲ ಶುರುವಾಗಲಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ತಮ್ಮ ಕ್ಷೇತ್ರ ಬ್ಯಾಟರಾಯನಪುರದಲ್ಲಿರುವ ರಾಜಾ ಕಾಲುವೆಯೊಂದರ ಹೂಳೆತ್ತಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಲು ಅವರು ಅಧಿಕಾರಿಗಳಿಗೆ ತಿಳಿಸಿ ಮೂರು ವಾರ ಕಳೆದರೂ ಅವರಿಂದ ಕೆಲಸವಾಗಿಲ್ಲ. ಇವತ್ತು ಸ್ಪಾಟ್ ಪರಿಶೀಲನೆಗೆ ಹೋದಾಗ ಕಾಲುವೆ ಯಥಾಸ್ಥಿತಿಯಲ್ಲಿರುವುದನ್ನು ಕಂಡು ಅವರು ಕೆಂಡಾಮಂಡರಾಗಿದ್ದಾರೆ. ಮಿಕ್ಕಿದ್ದನ್ನು ಈ ವಿಡಿಯೋ ಬಹಳ ಚೆನ್ನಾಗಿ ವಿವರಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಯಚೂರು: ಕೆಡಿಪಿ ಸಭೆಯಲ್ಲಿ ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಬೆವರಿಳಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ