ಊರುಗಳಿಗೆ ಹೋಗಬೇಕು ಅನ್ನೋರು ನಾಳೆಯೇ ಹೊರಟು ಬಿಡಿ: ಆರ್‌ ಅಶೋಕ್

| Updated By: ಸಾಧು ಶ್ರೀನಾಥ್​

Updated on: Jul 13, 2020 | 9:44 AM

[lazy-load-videos-and-sticky-control id=”-clDL1Aqopc”] ಬೆಂಗಳೂರು: ಕೊರೊನಾ ಮಾರಿಯನ್ನ ಕಂಟ್ರೋಲ್ ಮಾಡಲು ಚೈನ್ ಬ್ರೇಕ್ ಮಾಡಬೇಕಾಗಿದೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ಜನತೆ ಸಹಕರಿಸಬೇಕು. ಯಾರು ಬೆಂಗಳೂರು ಬಿಟ್ಟು ಹೋಗಬೇಕೆನ್ನುತ್ತಾರೋ ಅವರು ಸೋಮವಾರವೇ ಹೊರಡಲಿ. ಯಾರು ಇವತ್ತು ಹೋಗಬೇಕಿತ್ತೋ ಅವರು ಕೂಡಾ ಸೋಮವಾರ ಹೋಗಲಿ ಎಂದು ಕಂದಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಮತ್ತೆ ಬೆಂಗಳೂರಲ್ಲಿ ಲಾಕ್ಡೌನ್ ಪ್ರಕಟಿಸಿದ ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ನಂತರ ಮಾತನಾಡಿದ ಆರ್ ಅಶೋಕ್, ಬೆಂಗಳೂರು ಲಾಕ್ […]

ಊರುಗಳಿಗೆ ಹೋಗಬೇಕು ಅನ್ನೋರು ನಾಳೆಯೇ ಹೊರಟು ಬಿಡಿ: ಆರ್‌ ಅಶೋಕ್
Follow us on

[lazy-load-videos-and-sticky-control id=”-clDL1Aqopc”]

ಬೆಂಗಳೂರು: ಕೊರೊನಾ ಮಾರಿಯನ್ನ ಕಂಟ್ರೋಲ್ ಮಾಡಲು ಚೈನ್ ಬ್ರೇಕ್ ಮಾಡಬೇಕಾಗಿದೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ಜನತೆ ಸಹಕರಿಸಬೇಕು. ಯಾರು ಬೆಂಗಳೂರು ಬಿಟ್ಟು ಹೋಗಬೇಕೆನ್ನುತ್ತಾರೋ ಅವರು ಸೋಮವಾರವೇ ಹೊರಡಲಿ. ಯಾರು ಇವತ್ತು ಹೋಗಬೇಕಿತ್ತೋ ಅವರು ಕೂಡಾ ಸೋಮವಾರ ಹೋಗಲಿ ಎಂದು ಕಂದಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಮತ್ತೆ ಬೆಂಗಳೂರಲ್ಲಿ ಲಾಕ್ಡೌನ್ ಪ್ರಕಟಿಸಿದ ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ನಂತರ ಮಾತನಾಡಿದ ಆರ್ ಅಶೋಕ್, ಬೆಂಗಳೂರು ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ಸೇವೆಯ ಜೊತೆಗೆ ವೈದ್ಯಕೀಯ ಸಂಬಂಧಿತ ಫ್ಯಾಕ್ಟರಿಗಳನ್ನು ತೆರೆಯಲು ಸಿಎಂ ಅವಕಾಶ ನೀಡಿದ್ದಾರೆ. ಹೀಗಾಗಿ ಅಗತ್ಯ ಸೇವೆ ಹೊರತುಪಡಿಸಿ ಉಳಿದವರು ಮನೆಯಲ್ಲೇ ಇರಿ ಎಂದು ಜನತೆಗೆ ಮನವಿ ಮಾಡಿದ್ದಾರೆ.

ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಬಗ್ಗೆ ಮಾತನಾಡಿದ ಅಶೋಕ್, ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಸಮಸ್ಯೆ ಇದೆ, ಆದ್ರೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಬೆಡ್ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟ್ರೀಮ್ ಲೈನ್ ಮಾಡಿದರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ನೀಗುತ್ತದೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು ಲಾಕ್‌ಡೌನ್‌ ಬಗ್ಗೆ ಸ್ಪಷ್ಟನೆ ನೀಡಿದ ಕಂದಾಯ ಸಚಿವ, ಬೆಂಗಳೂರು ಲಾಕ್ ಡೌನ್ ಸದ್ಯಕ್ಕೆ ಏಳು ದಿನ ಮಾತ್ರ. ಈ ಅವಧಿಯಲ್ಲಿ ಕೊರೊನಾ ಸ್ಪೀಡ್ ಯಾವ ರೀತಿ ಕಡಿಮೆ ಆಗುತ್ತದೆ ಎಂಬುದನ್ನು ನೋಡಿಕೊಂಡು ನಂತರ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂದು ತಜ್ಞರ ವರದಿ ಪಡೆದು ತೀರ್ಮಾನಿಸುತ್ತೇವೆ ಎಂದರು.

Published On - 2:04 pm, Sun, 12 July 20