ಮನೆಯಲ್ಲಿನ ಅಕ್ಕಿ ಖಾಲಿಯಾಗದಂತೆ ನೋಡಿಕೊಳ್ಳಬೇಕು ಏಕೆ? ವಿಡಿಯೋ ನೋಡಿ
ಅನ್ನ ಊಟ ಮಾಡುವಾಗ ಅನಾವಶ್ಯಕವಾಗಿ ಮಾತನಾಡುವುದಕ್ಕಿಂತ, ಇತರ ವಿಷಯಗಳನ್ನು ಮಾಡುವುದಕ್ಕಿಂತ ದೇವರ ನಾಮವನ್ನು ಜಪಿಸುತ್ತ ಅನ್ನವನ್ನು ಸೇವಿಸಿ. ಅನ್ನದ ಮಹತ್ವ, ಅನ್ನ ಸೇವಿಸುವ ಮುನ್ನ ಯಾರನ್ನೆಲ್ಲ ನೆನೆಯಬೇಕೆಂದು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ |
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ ||
ಈ ಶ್ಲೋಕದಲ್ಲಿ ಪಾರ್ವತಿದೇವಿಯ ಅವತಾರವಾದ ಅನ್ನಪೂರ್ಣಾ ಮಾತೆಯನ್ನು ಪಾರ್ಥಿಸಿ, ತಟ್ಟೆಯಲ್ಲಿರುವ ಅನ್ನವನ್ನು ಅವಳು ದಯಪಾಲಿಸಿದ ಭಿಕ್ಷೆಯೆಂದು ಸ್ವೀಕರಿಸಲಾಗುತ್ತದೆ. ಇದರಿಂದ ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಮ್ಮಲ್ಲಿ ಮೂಡುತ್ತದೆ. ಅನ್ನ ಊಟ ಮಾಡುವಾಗ ಅನಾವಶ್ಯಕವಾಗಿ ಮಾತನಾಡುವುದಕ್ಕಿಂತ, ಇತರ ವಿಷಯಗಳನ್ನು ಮಾಡುವುದಕ್ಕಿಂತ ದೇವರ ನಾಮವನ್ನು ಜಪಿಸುತ್ತ ಅನ್ನ ಗ್ರಹಿಸಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ