ಕಾವ್ಯಾ ಜಪ ಮಾಡಿದ ಗಿಲ್ಲಿ ವಿರುದ್ಧ ಉರಿದು ಬಿದ್ದ ರಿಷಾ; ನಡೆಯಿತು ದೊಡ್ಡ ಫೈಟ್
Bigg Boss: ಗಿಲ್ಲಿ ನಟ ಹಾಗೂ ಕಾವ್ಯಾ ಬಾಂಧವ್ಯದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಆದರೆ, ಈ ಗೆಳೆತನದಿಂದ ಗಿಲ್ಲಿಗೆ ಸಾಕಷ್ಟು ಹಿನ್ನಡೆ ಆಗುತ್ತಿದೆ ಎಂಬರ್ಥದಲ್ಲಿ ರಿಷಾ ಮಾತನಾಡಿದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಗಿಲ್ಲಿ ನಟ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಹೀಗಾಗಿ, ಗಿಲ್ಲಿ ನಟ ಅವರು ಸಮಯ ಸಿಕ್ಕಾಗಲೆಲ್ಲ ಕಾವ್ಯಾ ಜೊತೆ ಇರುತ್ತಾರೆ. ಕಾವ್ಯಾ ಬಗ್ಗೆ ಮಾತನಾಡುತ್ತಾರೆ. ಗಿಲ್ಲಿ ಅವರು ಕಾವ್ಯಾ ಜಪ ಮಾಡೋದು ನೋಡಿ ರಿಷಾಗೆ ಉರಿದು ಹೋಗಿದೆ. ಇಬ್ಬರ ಮಧ್ಯೆಯೇ ಕಿತ್ತಾಟ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

