ಮಾಳು, ಸ್ಪಂದನಾ ಎಲಿಮಿನೇಟ್ ಆಗಬೇಕಿತ್ತು; ಬೇಸರ ಹೊರಹಾಕಿದ ರಿಷಾ ಗೌಡ
ರಿಷಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದರು. ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಅವರು ನಂತರ ಎಲಿಮಿನೇಟ್ ಆದರು. ಮೂರನೇ ವಾರಕ್ಕೆ ದೊಡ್ಮನೆಗೆ ಬಂದ ಅವರು ಹೊರ ಹೋಗಿದ್ದು ಎಂಟನೇ ವಾರದಲ್ಲಿ. ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಎಂಟನೇ ವಾರದಲ್ಲಿ ರಿಷಾ ಗೌಡ ಎಲಿಮಿನೇಷನ್ ಆಗಿದ್ದಾರೆ. ಅವರು ಹೊರ ಬಂದಿದ್ದು ಅವರಿಗೇ ಆಶ್ಚರ್ಯ ತಂದಿದೆ. ಈ ವಾರ ಮಾಳು ಅಥವಾ ಸ್ಪಂದನಾ ದೊಡ್ಮನೆಯಿಂದ ಹೊರ ಹೋಗುತ್ತಾರೆ ಎಂಬುದು ರಿಷಾ ಆಲೋಚನೆ ಆಗಿತ್ತು. ಆದರೆ, ಆಲೋಚನೆ ತಲೆಕೆಳಗಾಗಿದೆ. ಈ ಬಗ್ಗೆ ರಿಷಾ ಅವರೇ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Nov 24, 2025 12:57 PM

